Monday, May 19, 2025
Homeಮಲೆನಾಡು ಕರ್ನಾಟಕಕೊಡಗುಕರ್ನಾಟಕ – ಕೇರಳದ ನಡುವೆ ಮುಕ್ತ ಪ್ರವೇಶಕ್ಕೆ ಒತ್ತಾಯ

ಕರ್ನಾಟಕ – ಕೇರಳದ ನಡುವೆ ಮುಕ್ತ ಪ್ರವೇಶಕ್ಕೆ ಒತ್ತಾಯ

ಕೊಡಗು: ಕೊಡಗು ಜಿಲ್ಲೆಯ ಮೂಲಕ ಕೇರಳ ಹಾಗೂ ಕರ್ನಾಟಕ ರಾಜ್ಯಗಳ ನಡುವೆ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡುವಂತೆ ಕೇರಳದ ಕಣ್ಣೂರಿನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಹರಿದಾಸ್ ನೇತೃತ್ವದ ತಂಡವು ಬುಧವಾರ ವಿರಾಜಪೇಟೆಯ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಕೋವಿಡ್ ಕಾರಣಕ್ಕೆ ಈ ಎರಡೂ ರಾಜ್ಯದ ನಡುವೆ ಕೆಲವು ತಿಂಗಳಿಂದ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಇಲ್ಲ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ನಿರ್ಬಂಧ ತೆರವು ಮಾಡಬೇಕು ಎಂದು ಕೋರಿದರು.

ಕೇರಳ ರಾಜ್ಯಕ್ಕೆ ಕರ್ನಾಟಕದಿಂದ ವಾಹನಗಳು ಮುಕ್ತವಾಗಿ ಬರುತ್ತಿವೆ. ಆದರೆ, ಕೇರಳದಿಂದ ಬರುವ ವಾಹನಗಳಿಗೆ ಕೊಡಗಿನ ಕುಟ್ಟ ಹಾಗೂ ಮಾಕುಟ್ಟದಲ್ಲಿ ನಿರ್ಬಂಧ ವಿಧಿಸಲಾಗುತ್ತಿದೆ.