ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕಾರಿಂಜ ದೇವಸ್ಥಾನದ ಆವರಣದಲ್ಲಿ ಪಾದರಕ್ಷೆ ಧರಿಸಿ ಪ್ರವೇಶಿಸಿದ್ದ ನಾಲ್ವರನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ಬುಶೇರ್ ರೆಹಮಾನ್, ಇಸ್ಮಾಯಿಲ್ ಅರ್ಹ ಮಾಜ್, ಮಹಮ್ಮದ್ ತಾನಿಶ್, ಮೊಹಮ್ಮದ್ ರಶಾದ್ ಬಂಧಿತ ಆರೋಪಿಗಳು.
ಕಾರಿನಲ್ಲಿ ಬಂದ ಆರೋಪಿಗಳು ಕಾರಿಂಜ ದೇವಸ್ಥಾನಕ್ಕೆ ಪಾದರಕ್ಷೆ ಧರಿಸಿಕೊಂಡು ಪ್ರವೇಶಿಸಿದ್ದು, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ದೇವಸ್ಥಾನ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು. ಈ ದೂರಿನ ಅನ್ವಯ ಪೊಲೀಸರು ಆರೋಪಗಳನ್ನು ಬಂಧಿಸಿದ್ದಾರೆ.