Saturday, December 14, 2024
Homeರಾಜ್ಯಮೈಸೂರು ವಿಭಾಗಕೃಷಿ ಕಾಯ್ದೆ ರದ್ದುಗೊಳಿಸಿದ ಕಾರಣ ತಿಳಿಸಿ: ಬಡಗಲಪುರ

ಕೃಷಿ ಕಾಯ್ದೆ ರದ್ದುಗೊಳಿಸಿದ ಕಾರಣ ತಿಳಿಸಿ: ಬಡಗಲಪುರ

ಮೈಸೂರು: ಮೂರು ಕೃಷಿ ಕಾಯ್ದೆ ರದ್ದುಗೊಳಿಸಿದ ನೈಜ ಕಾರಣವನ್ನು ದೇಶದ ಜನರಿಗೆ ತಿಳಿಸಿ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಶುಕ್ರವಾರ ಇಲ್ಲಿ ಆಗ್ರಹಿಸಿದರು.

ಚಳವಳಿಗೆ ಜಯ ಸಿಕ್ಕಿದೆ. ಇತಿಹಾಸ ಪುನರಾವರ್ತನೆಗೊಂಡಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದ ಅವರು, ಕಿಸಾನ್ ಮೋಚಾ೯ ಹೋರಾಟ ಅಚಲ. ಜನ ವಿರೋಧಿ ನೀತಿ ವಿರುದ್ಧ ಮುಂದುವರೆಯಲಿದೆ ಎಂದು ಘೋಷಿಸಿದರು.

ಕನಿಷ್ಠ ಬೆಂಬಲ ಬೆಲೆಗೆ ಶಾಸನದ ಬೆಂಬಲ ನೀಡಬೇಕು. ವಿದ್ಯುತ್ ಮಸೂದೆ ವಾಪಸ್ ಪಡೆಯಬೇಕು, ರದ್ದುಗೊಳಿಸಿದ ಕಾಮಿ೯ಕ ಸಂಹಿತೆಯ ನಾಲ್ಕು ಕೋಡ್ ಗಳನ್ನು ವಾಪಸ್ ಕೊಡಬೇಕು ಎಂದು ಒತ್ತಾಯಿಸಿದರು.

ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸಹ ಭೂ ಸುಧಾರಣೆ, ಎಪಿಎಂಸಿ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ನಾಗೇಂದ್ರ ಆಗ್ರಹಿಸಿದರು.