ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ಫೆ.11ರಂದು ಕೈದಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಾರಾಗೃಹದ ಮುಖ್ಯ ಅಧೀಕ್ಷಕ ಮಹೇಶ್ ಸೇರಿದಂತೆ 13 ಸಿಬ್ಬಂದಿ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಐದು ಎಫ್‌ಐಆರ್ ದಾಖಲಿಸಲಾಗಿದೆ.
ಅಂದು ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ 200ಕ್ಕು ಹೆಚ್ಚು ಕೈದಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಹಲವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯಕೀಯ ಪ್ರಮಾಣಪತ್ರಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ವಕೀಲರಾದ ಕೆ.ಪಿ.ಶ್ರೀಪಾಲ್, ವಿಜಯ್
ಶೈರಾಜ್ ಅಹಮದ್, ರಾಜಪ್ಪ, ಕೆ.ಎಸ್.ನಟರಾಜ್ ಮಾಹಿತಿ ನೀಡಿದರು.
ಮಹೇಶ್ ವರ್ಗಾವಣೆ: ಎಫ್‌ಐಆರ್ ದಾಖಲಾದ ಬೆನ್ನಿಗೇ ಕಾರಾಗೃಹದ ಮುಖ್ಯ ಅಧೀಕ್ಷಕ ಮಹೇಶ್ ಅವರನ್ನು ಸರ್ಕಾರ ಮೈಸೂರಿಗೆ ವರ್ಗಾಯಿಸಿದೆ. ಕಲಬುರ್ಗಿ ಕಾರಾಗೃಹದ ಮಹಾದೇವಯ್ಯ ಅವರನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ನಿಯೋಜಿಸಲಾಗಿದೆ.