ಪ್ರತಿವರ್ಷ ನವೆಂಬರ್, ಡಿಸೆಂಬರ್ ಬಂದರೆ ಎಲ್ಲೆಲ್ಲಿಂದ ವಲಸೆ ಹಕ್ಕಿಗಳು ಹಾರಿಕೊಂಡು ಹರಿಹರ ತಾಲೂಕಿನ ಕೊಂಡಜ್ಜಿ ಕೆರೆಗೆ ಬರುತ್ತವೆ. ಈ ಬಾರಿಯೂ ಹಕ್ಕಿಗಳ ಕಲರವ ಆರಂಭಗೊಂಡಿದೆ.
ಕೆರೆಯಲ್ಲಿ ನೀರು ತುಂಬಿದ್ದರಿಂದ ಸುತ್ತಮುತ್ತ ಬೇಕಾದ ಆಹಾರ ಸುಲಭದಲ್ಲಿ ಸಿಗುವುದರಿಂದ ಕೊಂಡಜ್ಜಿ ಕೆರೆ ಹಕ್ಕಿಗಳಿಗೆ ಎಲ್ಲಿಲ್ಲದ ಅಚ್ಚುಮೆಚ್ಚು. ಈ ಕಾರಣಕ್ಕಾಗಿ ಟಿಟ್ಟಿಬಾ, ನೀರುಕಾಗೆ, ಕೊಕ್ಕರೆಗಳು, ಕಾಮನ್ ಮೈನ, ಸೊಪ್ಪು ಕುಟುರು ಹಕ್ಕಿ ಹೀಗೆ ನಾನಾ ತರದ ಹಕ್ಕಿಗಳು ಇಲ್ಲಿರುತ್ತವೆ. ಇದರ ಜೊತೆಗೆ ಸಾವಿರಾರು ಕಿಲೋಮೀಟರ್ ದೂರದಿಂದ ಮಂಗೋಲಿಯನ್ ಹಕ್ಕಿಗಳು ಕೂಡ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಬರುತ್ತವೆ. ಈ ಬಾರಿ ಇದೀಗ ಹಕ್ಕಿಗಳ ಬರುವಿಕೆ ಆರಂಭಗೊಂಡಿದೆ. ಈ ಹಕ್ಕಿಗಳು ನೀರಿನಲ್ಲಿ ಈಜಾಡುವುದು ನೀರಿನ ಸುತ್ತ ರೆಕ್ಕೆಬಡಿಯದೆ ತೇಲಾಡುವಂತೆ ಹಾರಾಡುವುದು ನೋಡುವುದೇ ಒಂದು ಆನಂದ.
ಈ ಈ ವಲಸೆ ಹಕ್ಕಿಗಳ ಹಾರಾಟ ಆರಂಭಗೊಳ್ಳುತ್ತಿದ್ದಂತೆ ಅವುಗಳನ್ನು ನೋಡಲು ಎಲ್ಲೆಲ್ಲಿಂದ ಜನ ಬರುತ್ತಾರೆ ಅವುಗಳನ್ನು ಕಣ್ಣಲ್ಲಿ ತುಂಬಿಕೊಂಡು ತಮ್ಮ ಮೊಬೈಲುಗಳಲ್ಲಿ ಸೆರೆ ಹಿಡಿದುಕೊಂಡು ಸಂತೋಷದಿಂದ ಹಿಂತಿರುಗುತ್ತಾರೆ
ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೊಂಡಜ್ಜಿ ಕೆರೆಯ ತುಂಬಿ ಹರಿಯುತ್ತಿರುವುದು ಕೂಡ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.
ಕೆರೆಯ ಸುತ್ತಮುತ್ತ ಇರುವ ಮರಗಳಲ್ಲ ಹಕ್ಕಿಗಳ ಗೂಡು ಗಳಾಗಿ ಪರಿವರ್ತನೆಗೊಂಡಿವೆ. ಈ ಮರಗಳಲ್ಲಿ ಹಕ್ಕಿಗಳು ಭಾರಿ ಸಂಖ್ಯೆಯಲ್ಲಿ ಕುಳಿತು ಕೊಂಡಿರುತ್ತವೆ. ಮುಂಜಾನೆ ಇಲ್ಲವೇ ಮುಸ್ಸಂಜೆಯ ಎಳೆ ಬಿಸಿಲಿಗೆ ಕಾಣುವ ನೋಟವೇ ಅದ್ಭುತವಾಗಿರುತ್ತದೆ.