Monday, May 19, 2025
Homeಕ್ರೀಡೆಕ್ರಿಕೆಟ್ಕ್ಯಾಪ್ಟನ್‌ ಕೂಲ್‌ ಇಲ್ಲದ ವಿಶ್ವಕಪ್

ಕ್ಯಾಪ್ಟನ್‌ ಕೂಲ್‌ ಇಲ್ಲದ ವಿಶ್ವಕಪ್

ದುಬೈ: ಕ್ಯಾಪ್ಟನ್‌ ಕೂಲ್‌ ಎಂದು ಹೆಸರಾಗಿರುವ ಮಹೇಂದ್ರ ಸಿಂಗ್‌ ದೋನಿ ಟಿ 20 ಕ್ರಿಕೆಟ್‌ ಆರಂಭವಾದಲ್ಲಿಂದ ಇಲ್ಲಿವರೆಗೆ ನಿರಂತರ ಆಡುತ್ತಾ ಬಂದಿದ್ದರು. ಮೊದಲ ವಿಶ್ವಕಪ್‌ನಲ್ಲೇ ತನ್ನ ಚಾಣಕ್ಷತನದ ಕಪ್ತಾನಗಿರಿ ತೋರಿಸಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದರು. ಟಿ 20 ಸಹಿತ ಎಲ್ಲ ಮಾದರಿಯಲ್ಲಿ ಭಾರತವನ್ನು ವಿಶ್ವಚಾಂಪಿಯನ್‌ ಮಾಡಿದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಕೂಡಾ ದೋನಿ ಹೆಸರಲ್ಲಿದೆ.

ವಯಸ್ಸಿನ ಕಾರಣದಿಂದ ಅನಿವಾರ್ಯವಾಗಿ ದೋನಿ ನಿವೃತ್ತಿ ಘೋಷಿಸಿದ್ದಾರೆ. ಆದರೆ ಐಪಿಎಲ್‌ನಲ್ಲಿ ಇನ್ನೂ ಆಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಬಾರಿಯ ಐಪಿಎಲ್‌ ಚಾಂಪಿಯನ್‌ ಆಗಿ ಚೆನ್ನೈ ಸೂಪರ್‌ ಕಿಂಗ್‌ ಹೊರಹೊಮ್ಮುವಂತೆ ಮಾಡಿ ವಯಸ್ಸಾಗಿರಬಹುದು. ಆದರೆ ಕ್ರಿಕೆಟ್‌ ಇನ್ನೂ ಬತ್ತಿಲ್ಲ ಎಂದು ತೋರಿಸಿದ್ದರು.

ಅಂಥ ದೋನಿ ಈ ಬಾರಿ ಭಾರತ ಕ್ರಿಕೆಟ್‌ ತಂಡದಲ್ಲಿ ಮೆಂಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮೈದಾನದಲ್ಲಿ ಇಲ್ಲದೇ ಇದ್ದರೂ ತಂಡದೊಂದಿಗೆ ಇದ್ದು ಸಲಹೆ ನೀಡುತ್ತಿದ್ದಾರೆ.