ದುಬೈ: ಮಾರ್ಕಸ್ ಸ್ಟೊಯಿನಿಸ್ ಮತ್ತು ಮ್ಯಾಥ್ಯೂ ವೇಡ್ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಆಸ್ಟ್ರೇಲಿಯಾ ತಂಡವು ಗುರುವಾರ ನಡೆದ ಟಿ20 ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಎದುರು 5 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ 14ರಂದು ನಡೆಯಲಿರುವ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಕೊನೇಯ ನಾಲ್ಕು ಓವರ್‌ಗಳಲ್ಲಿ 50 ರನ್ ಇಂಗ್ಲೆಂಡ್‌ಗೆ ಅವಶ್ಯಕತೆ ಇತ್ತು. ಕೊನೇ ಎರಡು ಓವರ್‌ಗಳಲ್ಲಿ 22 ರನ್ ಬೇಕಿತ್ತು. ಅದನ್ನು ಒಂದೇ ಓವರ್‌ನಲ್ಲಿ ಹೊಡೆಯುವ ಮೂಲಕ ಒಂದು ಓವರ್ ಉಳಿಸಿದರು.
ನ್ಯೂಜಿಲೆಂಡ್ ತಂಡವು ಬುಧವಾರ ಇದೇ ರೀತಿಯಲ್ಲಿ ಇಂಗ್ಲೆಂಡ್ ಅನ್ನು ಬಗ್ಗು ಬಡಿದು ಫೈನಲ್‌ಗೆ ತಲುಪಿತ್ತು. ನ್ಯೂಜಿಲೆಂಡ್‌ಗೆ ಕೊನೇ ಎರಡು ಓವರ್‌ಗಳಲ್ಲಿ 20 ರನ್ ಬೇಕಿತ್ತು. ಅದನ್ನು ಒಂದೇ ಓವರ್‌ನಲ್ಲಿ ಹೊಡೆದಿದ್ದರು.