Saturday, December 14, 2024
Homeಮಧ್ಯ ಕರ್ನಾಟಕಚಿತ್ರದುರ್ಗಗೋಡೆ ಕುಸಿದು ದಂಪತಿ ಸಾವು

ಗೋಡೆ ಕುಸಿದು ದಂಪತಿ ಸಾವು

ಚಿತ್ರದುರ್ಗ: ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆ ಗೋಡೆ ಕುಸಿದು ಯುವ ದಂಪತಿ ಮೃತಪಟ್ಟಿರುವ ಘಟನೆ ಹಿರಿಯೂರು ತಾಲ್ಲೂಕಿನ ಕಾರೋಬನಹಟ್ಟಿಯಲ್ಲಿ ನಡೆದಿದೆ.

ಚೆನ್ನಕೇಶವ (26), ಸೌಮ್ಯ (20) ಮೃತ ದಂಪತಿ. ಚೆನ್ನಕೇಶವ ಅವರ ತಂದೆ ಕ್ಯಾತಣ್ಣ (55) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ಯಾತಣ್ಣ ದಂಪತಿಗೆ ಇಬ್ಬರು ಪುತ್ರರು. ಚಿಕ್ಕಮಗನ ಕುಟುಂಬದೊಂದಿಗೆ ಕ್ಯಾತಣ್ಣ ವಾಸ ಮಾಡುತ್ತಿದ್ದರು. ಮನೆ ಪಕ್ಕದ ಗುಡಿಸಲಿನಲ್ಲಿ ಚೆನ್ನಕೇಶವ ಹಾಗೂ ಸೌಮ್ಯ ಜೀವನ ಕಟ್ಟಿಕೊಂಡಿದ್ದರು. ಭಾನುವಾರ ನಸುಕಿನಲ್ಲಿ ಮನೆಕುಸಿದು ಗುಡಿಸಲಿನ ಮೇಲೆ ಬಿದ್ದು ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಐಮಂಗಲ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.