Monday, May 19, 2025
Homeರಾಜ್ಯಮಲೆನಾಡು ಕರ್ನಾಟಕಚರಂಡಿಗೆ ಬಿದ್ದು ವೃದ್ಧ ಸಾವು

ಚರಂಡಿಗೆ ಬಿದ್ದು ವೃದ್ಧ ಸಾವು

ಹಿರೀಸಾವೆ: ಆಯತಪ್ಪಿ ಕಾಮಗಾರಿ ನಡೆಯುತ್ತಿರುವ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಗ್ರಾಮದಲ್ಲಿ ನಡೆದಿದೆ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಗ್ರಾಮದ ಅಂಜನಿ (60) ಮೃತರು.

ಇವರು ಹಲವು ವರ್ಷಗಳಿಂದ ಮನೆ ಬಿಟ್ಟು, ಊರೂರು ಸುತ್ತಿಕೊಂಡು, ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್ ರಸ್ತೆಯ ಶನಿದೇವರ ದೇವಸ್ಥಾನದ ಬಳಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಕತ್ತಲೆಯಲ್ಲಿ ಗೊತ್ತಾಗದೆ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದು, ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಎಸ್ಐ ಶ್ರೀನಿವಾಸ್ ತಿಳಿಸಿದರು.