Monday, May 19, 2025
Homeಸುದ್ದಿಚಾಕು ಇರಿತ; ಗಾಯಾಳು ಕಿಮ್ಸ್'ಗೆ 

ಚಾಕು ಇರಿತ; ಗಾಯಾಳು ಕಿಮ್ಸ್’ಗೆ 

ಹುಬ್ಬಳ್ಳಿ: ಇಬ್ಬರು ಸ್ನೇಹಿತರು ಪರಿಚಿತ ವ್ಯಕ್ತಿಗೆ ಚಾಕು ಇರಿದ ಪ್ರಕರಣ ಶುಕ್ರವಾರ ಹೆಗ್ಗೇರಿಯಲ್ಲಿ ನಡೆದಿದೆ.

ಹಳೇಹುಬ್ಬಳ್ಳಿ ನಿವಾಸಿ ಆಸೀಫ್ ಗಂಭೀರ ಗಾಯಗೊಂಡಿದ್ದು, ಕಿಮ್ಸ್’ಗೆ ದಾಖಲಿಸಲಾಗಿದೆ. ಮಾರುತಿ ನಗರದ ನಿವಾಸಿಯಾದ ರೆಹಮತ್ ಮತ್ತು ಗೌಸ್ ಚಾಕು ಇರಿದ ಆರೋಪಿಗಳು.

ಮೂವರು ಸ್ನೇಹಿತರು ಜೊತೆಯಲ್ಲಿದ್ದಾಗ ಅವರಲ್ಲಿ ಯಾವುದೋ ವಿಷಯಕ್ಕೆ ಜಗಳವಾಗಿದೆ. ಆಗ, ಇಬ್ಬರು ಸೇರಿ ಆಸೀಫ್‌ ಅವರ ಎದೆ, ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾರೆ. ಆ ಸಂದರ್ಭ ಅವರು ಗಾಂಜಾ ಸೇವನೆ ಮಾಡಿದ್ದರು ಎನ್ನುವ ಮಾಹಿತಿಯಿದೆ. ಆರೋಪಿಗಳ ಬಂಧಿನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.