Monday, May 19, 2025
Homeಮಧ್ಯ ಕರ್ನಾಟಕದಾವಣಗೆರೆಚಿಪ್ಪುಹಂದಿಯ ಚಿಪ್ಪು ಮಾರಾಟ: 18 ಮಂದಿಯ ಸೆರೆ

ಚಿಪ್ಪುಹಂದಿಯ ಚಿಪ್ಪು ಮಾರಾಟ: 18 ಮಂದಿಯ ಸೆರೆ

ದಾವಣಗೆರೆ: ಹರಿಹರ–ಶಿವಮೊಗ್ಗ ರಸ್ತೆಯ ಬದಿಯಲ್ಲಿ ಪ್ಯಾಂಗೊಲಿನ್‌ (ಚಿಪ್ಪುಹಂದಿ) ಚಿಪ್ಪುಗಳನ್ನು ಮಾರಾಟ ಮಾಡುತ್ತಿದ್ದ 18 ಮಂದಿಯನ್ನು ಡಿಸಿಆರ್‌ಬಿ ಪೊಲೀಸರು ಬಂಧಿಸಿದ್ದಾರೆ. 67.7 ಕೆ.ಜಿ. ಚಿಪ್ಪುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಳಿವಿನಂಚಿನಲ್ಲಿ ಇರುವ ಪ್ಯಾಂಗೊಲಿನ್‌ನ ಚಿಪ್ಪುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿಸಿಆರ್‌ಬಿ ಡಿವೈಎಸ್‌ಪಿ ಬಿ.ಎಸ್‌. ಬಸವರಾಜ್‌ ನಿರ್ದೇಶನದಲ್ಲಿ ಸಿಇಎನ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿ.ವಿ. ಗಿರೀಶ್‌, ಸಿಬ್ಬಂದಿ ಪ್ರಕಾಶ್‌, ಮುತ್ತುರಾಜ, ಲೋಹಿತ್‌, ಮಲ್ಲಿಕಾರ್ಜುನ ಹಾದಿಮನಿ, ದ್ಯಾಮೇಶ್‌, ಕೊಟ್ರೇಶ್‌ ದಾಳಿ ಮಾಡಿದ್ದರು.

ಕೃತ್ಯಕ್ಕೆ ಬಳಸಿದ 2 ಆಮ್ನಿ, ಒಂದು ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.