Saturday, December 14, 2024
Homeರಾಜ್ಯಮಲೆನಾಡು ಕರ್ನಾಟಕದಸರಾಕ್ಕೆ ಆನೆಗಳ ಕರೆತರಲು ರಾಜಮರ್ಯಾದೆ: ವಾಪಸ್‌ ಕಳುಹಿಸಲು ಕೇಳುವವರಿಲ್ಲ

ದಸರಾಕ್ಕೆ ಆನೆಗಳ ಕರೆತರಲು ರಾಜಮರ್ಯಾದೆ: ವಾಪಸ್‌ ಕಳುಹಿಸಲು ಕೇಳುವವರಿಲ್ಲ

ಶಿವಮೊಗ್ಗ: ಆಯೋಜಿಸಿದ್ದ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆಗಳಿಗೆ ಮಹಾನಗರ ಪಾಲಿಕೆ ಆಡಳಿತ ಆಗೌರವ ತೋರಿದೆ ಎಂಬ ಆರೋಪಗಳು ಕೇಳಿಬಂದಿದೆ.

ಪ್ರತಿ ವರ್ಷ ದಸರಾದಲ್ಲಿ ಭಾಗವಹಿಸಿದ್ದ ಆನೆಗಳನ್ನು ವಾಹನದಲ್ಲಿ ಕರೆತಂದು ದಸರಾ ಮುಗಿದ ನಂತರ ವಾಹನದಲ್ಲೆ ಸಕ್ರೆಬೈಲಿಗೆ ಕರೆತರಲಾಗುತ್ತಿತ್ತು. ಆದರೆ, ಈ ಬಾರಿ ದಸರಾದಲ್ಲಿ ಭಾಗವಹಿಸಿದ್ದ ಸಾಗರ್‌ ಹಾಗೂ ಭಾನುಮತಿ ಆನೆಗಳನ್ನು ಸಕ್ರೆಬೈಲಿನಿಂದ ನಡೆಸಿಕೊಂಡು ಶಿವಮೊಗ್ಗಕ್ಕೆ ಕರೆತರಲಾಗಿದೆ. ಹೋಗುವಾಗಲೂ ನಡೆಸಿಕೊಂಡು ಹೋಗಿದ್ದಾರೆ. ಇದಕ್ಕೆ ಪರಿಸರವಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಸರಾ ಮೆರವಣಿಗೆಯಲ್ಲಿ ಇವರೆಡೂ ಆನೆಗಳು ಸ್ವಲ್ಪ ದೂರ ಹೆಜ್ಜೆ ಹಾಕಿದ್ದವು. ಬಳಿಕ ಹಿಂತಿರುಗಿದ್ದವು. ಆ ದಿನ ಮಧ್ಯಾಹ್ನವೇ ಆನೆಗಳು ಬಿಡಾರಕ್ಕೆ ಮರಳಿವೆ. ಶಿವಮೊಗ್ಗದಿಂದ ಸಕ್ರೆಬೈಲು ಬಿಡಾರದವರೆಗೂ ಆನೆಗಳು ನಡೆದುಕೊಂಡೇ ಹೋಗಿವೆ. ದಸರಾ ಹಿನ್ನೆಲೆ ಆನೆಗಳಿಗೆ ಹಚ್ಚಲಾಗಿದ್ದ ಬಣ್ಣವು ಹಾಗೆ ಇತ್ತು. ಆನೆಗಳು ನಡೆದು ಹೋಗುತ್ತಿರುವ ದೃಶ್ಯವನ್ನು ಪರಿಸರವಾದಿಗಳ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿ ಬಾರಿ ಶಿವಮೊಗ್ಗ ದಸರಾದ ಅಂಬಾರಿ ಹೊರಲು ಸಕ್ರೆಬೈಲು ಬಿಡಾರದಿಂದ ಆನೆಗಳನ್ನು ಕರೆಸಲಾಗುತ್ತದೆ. ಜಂಬೂ ಸವಾರಿ ಮರುದಿನ ಮಾವುತ, ಕಾವಾಡಿ, ಬಿಡಾರದ ಅಧಿಕಾರಿಗಳಿಗೆ ಗೌರವ ಸಲ್ಲಿಸಿ, ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತಿತ್ತು. ಆದರೆ ಈ ಬಾರಿ ಅಂತಹ ಪರಿಪಾಠವಿಲ್ಲದಾಗಿದೆ ಎಂದು ಪರಿಸರವಾದಿಗಳು ದೂರಿದ್ದಾರೆ.