ಪ್ಯಾರೀಸ್: ಖ್ಯಾತ ಫುಟ್ಬಾಲ್ ತಾರೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಇತಿಹಾಸ ನಿರ್ಮಿಸಿದ್ದಾರೆ. ಏಳನೇ ಬಾರಿಗೆ ಪುರುಷರ ವಿಭಾಗದ ಬ್ಯಾಲನ್ ಡಿ ಓರ್ ಗೌರವಕ್ಕೆ ಪಾತ್ರರಾಗಿದ್ದಾರೆ.
ರಾಬರ್ಟ್ ಲೆವಾಂಡೋವಿ ಮತ್ತು ಜೋರ್ಗಿನ್ನೋ ಅವರನ್ನು ಸೋಲಿಸಿ ವಿಶ್ವದ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಫ್ರಾನ್ಸ್ ಫುಟ್‌ಬಾಲ್ ನಿಯತಕಾಲಿಕೆ ಈ ಪ್ರಶಸ್ತಿ ನೀಡುತ್ತದೆ. ವರ್ಷದ ಶ್ರೇಷ್ಠ ಫುಟ್‌ಬಾಲ್ ಆಟಗಾರನಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.