ಬೆಂಗಳೂರು: 2021–22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪರದವಿಪೂರ್ವ ಶಿಕ್ಷಣ ಇಲಾಖೆ ಸೋಮವಾರ ಪ್ರಕಟಿಸಿದೆ.
ಏಪ್ರಿಲ್ 22ರಿಂದ ಮೇ 18ರವರೆಗೆ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆಗಳು ನಡೆಯಲಿವೆ.
ವೇಳಾಪಟ್ಟಿಯ ಪ್ರಕಾರ, ಏಪ್ರಿಲ್ 22ರಂದು ವ್ಯವಹಾರ ಅಧ್ಯಯನ, 23ರಂದು ಗಣಿತ, 25ರಂದು ಅರ್ಥಶಾಸ್ತ್ರ, 26ರಂದು ರಸಾಯನವಿಜ್ಞಾನ, 27ರಂದು ಸಂಸ್ಕೃತ, 28ರಂದು ಕನ್ನಡ, ಮೇ 2ರಂದು ಭೂಗೋಳಶಾಸ್ತ್ರ, ಜೀವವಿಜ್ಞಾನ, ಮೇ 5ರಂದು ಇಂಗ್ಲಿಷ್, 10ರಂದು ಇತಿಹಾಸ, ಭೌತವಿಜ್ಞಾನ, 12ರಂದು ರಾಜ್ಯಶಾಸ್ತ್ರ, 14ರಂದು ಸಮಾಜಶಾಸ್ತ್ರ, 17ರಂದು ಭೂವಿಜ್ಞಾನ ಮತ್ತು ಐಚ್ಛಿಕ ಕನ್ನಡ ಹಾಗೂ ಲೆಕ್ಕಶಾಸ್ತ್ರ, 18ರಂದು ಹಿಂದಿ ಪರೀಕ್ಷೆ ನಡೆಯಲಿದೆ.
ಏ. 24, ಏ. 29ರಿಂದ ಮೇ 1, ಮೇ 3 ರಂಜಾನ್, ಬಸವ ಜಯಂತಿ, ಮೇ6ರಿಂದ ಮೇ9, ಮೇ 11, 13, 15 ಮತ್ತು 16ರಂದು ಯಾವುದೇ ಪರೀಕ್ಷೆಗಳು ಇರುವುದಿಲ್ಲ.
‘ಏ. 22ರಿಂದ ಮೇ 11ರವರೆಗೆ ಪರೀಕ್ಷೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಈ ವೇಳಾಪಟ್ಟಿಯ ಮಧ್ಯೆ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ, ನವೋದಯ ವಿದ್ಯಾಲಯ ಪರೀಕ್ಷೆಗಳು ಸೇರಿದಂತೆ ಕೆಲವು ಪರೀಕ್ಷೆಗಳು ಬಂದ ಕಾರಣ ತಾತ್ಕಾಲಿಕ ವೇಳಾಪಟ್ಟಿಯನ್ನು ಬದಲಿಸುವಂತೆ ಆಕ್ಷೇಪಣೆ ಸಲ್ಲಿಕೆ ಆಗಿತ್ತು. ಎಲ್ಲ ಆಕ್ಷೇಪಣೆಗಳನ್ನು ಪರಿಗಣಿಸಿ ಪರಿಷ್ಕೃತ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.