ಹೊಳೆಹೊನ್ನೂರು: ಪಟ್ಟಣ ಸಮೀಪದ ಅಗಸನಹಳ್ಳಿ ಗ್ರಾಮದ ನಾಲೆಯಲ್ಲಿ ಎರಡು ತಿಂಗಳ ಮಗುವಿನ ಶವ ಪತ್ತೆಯಾಗಿದೆ.
ಗ್ರಾಮಸ್ಥರು ಜಮೀನಿಗೆ ಹೋಗುವಾಗ ಗ್ರಾಮದಲ್ಲಿ ಹರಿಯುವ ನಾಲೆಯಲ್ಲಿ ಮಗುವಿನ ಶವ ತೇಲುತ್ತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರೆಳಿ ಪರಿಶೀಲಿಸಿದಾಗ ಹೆಣ್ಣು ಮಗು ಆಗಿದ್ದು ಹಸಿರು ಲಂಗ, ಹಳದಿ ಚಡ್ಡಿ ತೊಡಿಸಲಾಗಿದ್ದು ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದೆ.