ದಾವಣಗೆರೆ: ನೀರನ್ನು ಸದ್ಬಳಕೆ ಮಾಡಿಕೊಳ್ಳದೆ ಇರುವುದು ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಮೂಲ. ನೀರಿನ ಸದ್ಬಳಕೆಗೆ ಒತ್ತು ನೀಡದಿದ್ದರೆ ಜಗತ್ತೇ ನಾಶವಾಗುವ ಸಂಭವ ಬರಬಹುದು ಎಂದು ಧಾರವಾಡದ ವಾಲ್ಮಿ ಸಂಸ್ಥೆಯ ನಿರ್ದೇಶಕ ರಾಜೇಂದ್ರ ಪೋದರ್ ತಿಳಿಸಿದರು.
ಅವರು ದಾವಣಗೆರೆಯಲ್ಲಿ ಮಂಗಳವಾರ ನಡೆದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಗಾರವನ್ನು ಉದ್ಘಾಟಿಸಿ ನೆಲ ಮತ್ತು ಜಲದ ಸದ್ಬಳಕೆ ಬಗ್ಗೆ ಮಾತನಾಡಿದರು
ನೀರಿನ ಪ್ರಮಾಣ ಕಡಿಮೆಯಾದರೆ ಭೂಮಿ ಬರಡಾಗಲಿದೆ ನೀರು ಹೆಚ್ಚಾದರೆ ಭೂಮಿ ಜೌಗುವಾಗಲಿದೆ, ಆದ್ದರಿಂದ ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿಕೊಂಡರೆ ಮಾಡಿಕೊಂಡರೆ ನೀರಿನ ಮಲಿನ ತಪ್ಪಿಸಬಹುದು ಭಾರತಕ್ಕೆ ಸ್ವತಂತ್ರ ಬಂದಾಗ ಪ್ರತಿ ವ್ಯಕ್ತಿಗೆ ವರ್ಷಕ್ಕೆ 5000 ಘನಮೀಟರ್ ನೀರು ಲಭ್ಯವಿದ್ದು ಆದರೆ ಈಗ ಪ್ರತಿ ವ್ಯಕ್ತಿಗೆ ಸಾವಿರದ ಐನೂರು ಮೀಟರಿಗೆ ಇಳಿಕೆಯಾಗಿದೆ ಶೇಕಡ 83 ನೀರು ಕೃಷಿ ಬಳಕೆಯಲ್ಲಿ ನಷ್ಟವಾಗುತ್ತಿದೆ ಎಂದರು
ಕಬ್ಬಿನ ಎಥನಾಲ್ ಉತ್ಪಾದನೆ ಏರಿಕೆ ಆದಷ್ಟು ದೇಶದ ಪರಿಸರ ಕಾಪಾಡಲು ಸಹಕಾರಿಯಾಗುತ್ತದೆ ಈ ಮೂಲಕ ದೇಶದ ಜಿಡಿಪಿ ಹೆಚ್ಚಾಗಲಿದೆ ಚೀನಾ ದೇಶದಿಂದ ಆಮದು ಮಾಡುವ ಎಥನಾಲ್ ನಿಲ್ಲಿಸಿ ದೇಶದಲ್ಲಿಯೇ ಹೆಚ್ಚು ಉತ್ಪಾದನೆಗೆ ಅವಕಾಶ ಕಲ್ಪಿಸಿದರೆ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಗಾಂಧಿ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹರಣಿಕುಮಾರ್ ತಿಳಿಸಿದರು.
ಸಭೆ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಭೌತಿಕ ಬೆಳವಣಿಗೆ ಜೊತೆಗೆ ಬೌದ್ಧಿಕ ಬೆಳವಣಿಗೆಗಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಬ್ಬು ಬೆಳೆಗಾರರಿಗೆ ಉಪಉತ್ಪನ್ನಗಳ ಲಾಭದಲ್ಲಿ ನ್ಯಾಯ ಸಿಗುತ್ತಿಲ್ಲ ಬೆಲೆ ನಿಗದಿ ಯಲ್ಲಿಯೂ ಅನ್ಯಾಯವಾಗುತ್ತಿದೆ ಕಬ್ಬಿನಿಂದ ಬರುವ ಆದಾಯದ ಬಗ್ಗೆ ರೈತರಿಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳ ಮೂಲಕ ಕಬ್ಬು ಬೆಳೆಗಾರರನ್ನು ಜಾಗೃತಿ ಮಾಡಲು ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರ್,ರಾಜ್ಯ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ್, ಸುರೇಶ್ ಪಾಟೀಲ್, ಲಕ್ಷ್ಮೀದೇವಿ, ಎನ್ ಎಚ್ ದೇವಕುಮಾರ್, ಹತ್ತಳ್ಳಿ ದೇವರಾಜ್ ಉಪಸ್ಥಿತರಿದ್ದರು. ಭಾಗ್ಯರಾಜ್ ಕಾರ್ಯಕ್ರಮ ನಿರೂಪಿಸಿದರು.