Monday, May 19, 2025
Homeಮಧ್ಯ ಕರ್ನಾಟಕಚಿತ್ರದುರ್ಗಮರಕ್ಕೆ ಕಾರು ಡಿಕ್ಕಿ. ಅಜ್ಜಿ ,ಮಗಳು, ಮೊಮ್ಮಗಳ ಸಾವು .

ಮರಕ್ಕೆ ಕಾರು ಡಿಕ್ಕಿ. ಅಜ್ಜಿ ,ಮಗಳು, ಮೊಮ್ಮಗಳ ಸಾವು .

ಚಿತ್ರದುರ್ಗ: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಅಜ್ಜಿ ಮಗಳು ಹಾಗೂ ಮೊಮ್ಮಗಳು ಮೃತಪಟ್ಟಿರುವ ದುರಂತ ಘಟನೆ ತಾಲೂಕಿನ ವಾಣಿವಿಲಾಸ ರಸ್ತೆಯ ಬಿರೇನಹಳ್ಳಿ ಸಮೀಪ ಮಂಗಳವಾರ ಬೆಳಗ್ಗೆ ನಡೆದಿದೆ.

ಮೃತಪಟ್ಟವರು ವಿಶಾಲಾಕ್ಷಿ (70), ಇವರ ಮಗಳು ರೇಣುಕಾದೇವಿ (39) ಇವರ ಮಗಳು ಸುದೀಕ್ಷಾ (17).
13 ವರ್ಷದ ಪ್ರತಿಕ್ಷಾ ಗಂಭೀರವಾಗಿ ಗಾಯಗೊಂಡಿದ್ದು ಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರು ಭದ್ರಾವತಿಯಿಂದ ಬೆಂಗಳೂರಿಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ ಶಿವಮೊಗ್ಗ-ಬೆಂಗಳೂರು ರಸ್ತೆ ವಿಸ್ತರಣೆ ಪ್ರಯುಕ್ತ ರಸ್ತೆ ಹಾಳಾಗಿರುವ ಕಾರಣ ಶಿವಮೊಗ್ಗದ ಕಡೆಯಿಂದ ಬೆಂಗಳೂರಿಗೆ ಹೋಗುವವರು ತರೀಕೆರೆ ಅಜ್ಜಂಪುರ ಹೊಸದುರ್ಗ ಹಿರಿಯೂರು ಮಾರ್ಗವಾಗಿ ಹೋಗುತ್ತಿದ್ದಾರೆ .

ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.