Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಮಲೆಬೆನ್ನೂರು: ಕಾಂಗ್ರೆಸಿಗೆ ಜಯ

ಮಲೆಬೆನ್ನೂರು: ಕಾಂಗ್ರೆಸಿಗೆ ಜಯ

ದಾವಣಗೆರೆ: ಹರಿಹರ ತಾಲ್ಲೂಕಿನ ಮಲೆಬೆನ್ನೂರು ಪುರಸಭೆಗೆ ಸಂಬಂಧಪಟ್ಟಂತೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರಳ ಬಹುಮತ ಪಡೆದಿದೆ.

23 ವಾರ್ಡ್ ಗಳಿದ್ದು, ಅದರಲ್ಲಿ ಕಾಂಗ್ರೆಸ್ 12 ಸ್ಥಾನ ಪಡೆದಿದೆ. ಬಿಜೆಪಿ 7, ಜೆಡಿಎಸ್ 3 ಕಡೆಗಳಲ್ಲಿ ಗೆದ್ದಿವೆ. ಒಂದು ಸ್ಥಾನ ಪಕ್ಷೇತರ ಪಾಲಾಗಿದೆ.

ಕಾಂಗ್ರೆಸ್ನ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. 10 ಮಂದಿ ಗೆದ್ದಿದ್ದಾರೆ. ಅಧಿಕಾರದ ಗದ್ದುಗೆ ಹಿಡಿಯಲು ಬೇಕಾದ 12 ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಂತಾಗಿದೆ.

ಹರಿಹರದ ಒಂದು ಸ್ಥಾನ ಕಾಂಗ್ರೆಸ್ಸಿಗೆ: ಹರಿಹರ ನಗರಸಭೆಯ 21ನೇ ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ.

ಕಾಂಗ್ರೆಸಿನ ಶಹಜದ ಸನಾವುಲ್ಲಾ ಅವರು 114 ಮತಗಳಿಂದ ಸಮೀಪ ಸ್ಪರ್ಧಿ ಬಿಜೆಪಿಯ ಕುಸುಮಾ ವರ್ಣೇಕರ್ ಅವರನ್ನು ಸೋಲಿಸಿದರು. ಜೆಡಿಎಸ್ಸಿನ ವೀಣಾ ಮೂರನೇ ಸ್ಥಾನಕ್ಕೆ ತೃಪ್ತರಾದರು.