Saturday, December 14, 2024
Homeಕರಾವಳಿ ಕರ್ನಾಟಕದಕ್ಷಿಣ ಕನ್ನಡಮಾತಿನ ಚಕಮಕಿ: ನಾಡಕೋವಿಯಿಂದ ಗುಂಡು ಹಾರಾಟ

ಮಾತಿನ ಚಕಮಕಿ: ನಾಡಕೋವಿಯಿಂದ ಗುಂಡು ಹಾರಾಟ

ಪುತ್ತೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿ ವೇಳೆ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರಿಗೆ ಗುರಿಯಿಟ್ಟು ನಾಡಕೋವಿಯಿಂದ ಗುಂಡು ಹಾರಿಸಿದ್ದಾರೆ. ಆದರೆ, ಗುರಿ ತಪ್ಪಿದ್ದರಿಂದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.

ತಾಲ್ಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಮೈದುನ ದೇವಪ್ಪ ಅವರು, ಧರ್ಣಮ್ಮ ಅವರಿಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗುರಿ ತಪ್ಪಿದ್ದರಿಂದ ಧರ್ಣಮ್ಮ ಅಪಾಯದಿಂದ ಪಾರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್ಪಿ ಡಾ.ಗಾನ.ಕೆ.ಕುಮಾರ್, ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.