ಮೈಸೂರು: ಮೈಸೂರು ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಐವರು ಸೈಕ್ಲಿಸ್ಟ್ಗಳು ಪುಣೆಯಲ್ಲಿ ನಡೆದ 18ನೇ ರಾಷ್ಟ್ರಮಟ್ಟದ ಮೌಂಟೇನ್ ಬೈಕಿಂಗ್ ಚಾಂಪಿಯನ್ಷಿಪ್ನಲ್ಲಿ ಪದಕ ಗೆದ್ದುಕೊಂಡಿದ್ದಾರೆ.
ಚರಿತ್ ಗೌಡ ಅವರು ಬಾಲಕರ 18 ವರ್ಷದೊಳಗಿನ ವಿಭಾಗದಲ್ಲಿ ಮೂರು ಚಿನ್ನ ಗೆದ್ದು ಗಮನಾರ್ಹ ಸಾಧನೆ ತೋರಿದರೆ, ಬಾಲಕರ 16 ವರ್ಷದೊಳಗಿನ ವಿಭಾಗದಲ್ಲಿ ಸಮರ್ಪಣ್ ಜೈನ್ ಎರಡು ಚಿನ್ನ ಜಯಿಸಿದರು.
ಪುರುಷರ ವಿಭಾಗದಲ್ಲಿ ಕೆ.ವಿ.ವೈಶಾಖ್ 1 ಬೆಳ್ಳಿ, ಬಾಲಕಿಯರ 16 ವರ್ಷದೊಳಗಿನ ವಿಭಾಗದಲ್ಲಿ ಕರೆನ್ ಮಾರ್ಷೆಲ್ 1 ಚಿನ್ನ, 1 ಬೆಳ್ಳಿ ಹಾಗೂ ಎಚ್.ಎನ್.ನಾಗಸಿರಿ 1 ಕಂಚು ಗೆದ್ದುಕೊಂಡರು.
ಪದಕ ಗೆದ್ದ ಸ್ಪರ್ಧಿಗಳನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಅವರು ಅಭಿನಂದಿಸಿದರು