ಔರಾದ್: ತಾಲ್ಲೂಕಿನಲ್ಲಿ ಲಸಿಕಾ ಅಭಿಯಾನದ ಅಂಗವಾಗಿ ಮನೆ ಮನೆಗೆ ತರಳಿ ಕೋವಿಡ್ ಲಸಿಕೆ ಹಾಕಿಸಲಾಯಿತು.
ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಅವರು ಕೊಳ್ಳೂರ್ ಗ್ರಾಮದ ಶತಾಯುಷಿ ಸಂಗಮ್ಮ ಸಾವಳೆ ಅವರ ಮನವೊಲಿಸಿ ಲಸಿಕೆ ಹಾಕಿಸಿದರು. ಮೊದಲಿಗೆ ಲಸಿಕೆ ಹಾಕಿಸಿಕೊಳ್ಳಲು ಈ ಅಜ್ಜಿ ಹಿಂದೇಟು ಹಾಕಿದರು. ಸೂಕ್ತ ತಿಳವಳಿಕೆ ನಂತರ ಅವರು ಖುಷಿಯಿಂದ ಲಸಿಕೆ ಹಾಕಿಸಿಕೊಂಡರು. ಇದೇ ಊರಿನ 70-80 ವಯಸ್ಸಿನ ಐವರಿಗೆ ಲಸಿಕೆ ಹಾಕಿಸಲಾಯಿತು. ತಾಲ್ಲೂಕಿನ ಬೋರಾಳ, ಬರದಾಪುರ ಗ್ರಾಮಗಳಿಗೆ ತೆರಳಿ ಲಸಿಕೆ ಹಾಕಿಸಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸುದೇಶ್, ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ, ಸಾಮಾಜಿಕ ಕಾರ್ಯಕರ್ತ ರಿಯಾಜ್ ಕೊಳ್ಳೂರ್, ಕ್ರಾಂತಿಕುಮಾರ, ಅಮರ ಬಿರಾದಾರ, ಡಾ. ಡ್ಯಾನಿಯಲ್, ದತ್ತಾತ್ರಿ ರ್ಯಾಕಲೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಇದ್ದರು.