Monday, May 19, 2025
Homeಕರಾವಳಿ ಕರ್ನಾಟಕಉಡುಪಿಸಬಿತಾ ಕೊರಗ ಗುಂಡ್ಮಿಗೆ ಡಾಕ್ಟರೇಟ್‌

ಸಬಿತಾ ಕೊರಗ ಗುಂಡ್ಮಿಗೆ ಡಾಕ್ಟರೇಟ್‌

ಉಡುಪಿ: ಜಿಲ್ಲೆಯ ಸಾಸ್ತಾನ ಸಮೀಪದ ಗುಂಡ್ಮಿ ನಿವಾಸಿ, ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಬಿತಾ ಅವರು ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.

ಪ್ರೊ. ಜೋಗನ್‌ ಶಂಕರ್‌ ಮಾರ್ಗದರ್ಶನದಲ್ಲಿ ಸಬಿತಾ ಮಂಡಿಸಿದ ‘ಇವಾಲುವೇಶನ್ ಆಫ್‌ ಪಾಲಿಸಿಸ್‌ ಆ್ಯಂಡ್‌ ಪ್ರೋಗ್ರಾಂ್‌ ಆಫ್‌ ಟ್ರೈಬಲ್‌ ಡೆವಲಪ್‌ಮೆಂಟ್‌ ಆಫ್ ಕರ್ನಾಟಕ ಸ್ಟೇಟ್‌– ಎ ಸಿಚುವೇಶನಲ್‌ ಅನಾಲಿಸಿಸ್‌’ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್‌ ನೀಡಿದೆ.

ಡಾ. ಸಬಿತಾ ಅವರು ಅಂಚಿನಲ್ಲಿರುವ ಬುಡಕಟ್ಟು ಕೊರಗ ಸಮುದಾಯದಲ್ಲಿ ಡಾಕ್ಟರೇಟ್‌ ಪಡೆದ ಮೊದಲ ಮಹಿಳೆಯಾಗಿದ್ದಾರೆ.