Monday, May 19, 2025
Homeರಾಜ್ಯಕಲ್ಯಾಣ ಕರ್ನಾಟಕಸಿಡಿಲು ಬಡಿದು ವ್ಯಕ್ತಿ, ಎತ್ತು ಸಾವು

ಸಿಡಿಲು ಬಡಿದು ವ್ಯಕ್ತಿ, ಎತ್ತು ಸಾವು

ಕೊಟ್ಟೂರು: ತಾಲ್ಲೂಕಿನ ಅಲಬೂರು ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಹಾಗೂ ಎತ್ತು ಮೃತಪಟ್ಟಿದೆ.

ಕಳ್ಳಿಮನಿ ಕೊಟ್ರೇಶ್ (55) ಮೃತ. ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಎತ್ತು ಸ್ಥಳದಲ್ಲೇ ಮೃತಪಟ್ಟಿದ್ದು, ಅಸ್ವಸ್ತರಾಗಿದ್ದ ಕೊಟ್ರೇಶಪ್ಪ ಅವರನ್ನು ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕೋಗಳಿ ಹೋಬಳಿಯ ಕಂದಾಯ ನಿರೀಕ್ಷಕ ಡಿ.ಶಿವಕುಮಾರ, ಗ್ರಾಮ ಲೆಕ್ಕಾಧಿಕಾರಿ ಸುಧಾ ಜೈನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.