Monday, May 19, 2025
Homeರಾಜ್ಯಉತ್ತರ ಕರ್ನಾಟಕಸೀಗಿ ಹುಣ್ಣಿಮೆ, ಚರಗ ಹಬ್ಬ: ಜವಾರಿ ಭೋಜನದ ಸವಿ...

ಸೀಗಿ ಹುಣ್ಣಿಮೆ, ಚರಗ ಹಬ್ಬ: ಜವಾರಿ ಭೋಜನದ ಸವಿ…

ಬಾಗಲಕೋಟೆ : ಮಸಾರಿ ಜಮೀನುಗಳ ಕೃಷಿಕರು ‘ಸೀಗಿ’ ಹುಣ್ಣಿಮೆ ಆಚರಣೆ ನಿಮಿತ್ತ ಬಂಧು, ಮಿತ್ರ ಪರಿವಾರದೊಂದಿಗೆ ಹೊಲಗಳಿಗೆ ತೆರಳಿ ಭೂಮಾತೆಗೆ ನಮಿಸಿ, ನೈವೇದ್ಯ ಅರ್ಪಿಸುವದರೊಂದಿಗೆ ಚರಗದ ಹಬ್ಬದ ಸಡಗರ, ಖುಷಿ ಅನುಭವಿಸಿದರು.

ಈ ಹಬ್ಬಕ್ಕೆಂದೇ ರೈತಾಪಿ ಕುಟುಂಬಗಳ ಹೆಂಗಳೆಯರು ಹಿಂದಿನ ರಾತ್ರಿಯೆಲ್ಲಾ ಎದ್ದು ಚರಗಕ್ಕೆ ಬೇಕಾದ ಭಕ್ಷö್ಯ-ಭೋಜನ ತಯಾರಿಯಲ್ಲಿ ತೊಡಗುತ್ತಾರೆ.ಇದಕ್ಕೆ ಓಣಿಯ ಸ್ತಿçÃಯರೆಲ್ಲ ಭರದ ತಯಾರಿಗೆ ಸಾಥ್ ನೀಡಿದರು.

ಸಜ್ಜಿ, ಜೋಳದ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ, ಚಪಾತಿ, ಕೆನೆ ಮೊಸರು, ಶೇಂಗಾ, ಗುರೆಳ್ಳು, ಪುಟಾಣಿ ವಿವಿಧ ಬಗೆಯ ಚಟ್ನಿಗಳು ಹಾಗೂ ಕಡಬು, ಖರ್ಚಿಕಾಯಿ, ಸಜ್ಜೆಗಡಬು, ಜವಾರಿ ಚವಳಿಕಾಯಿ ಪಲ್ಯೆ ಮತ್ತು ಮೆಣಸಿನಕಾಯಿ ಪಲ್ಯೆ ಮುಂತಾದ ಬಗೆ ಬಗೆಯ ಭಕ್ಷö್ಯ, ಭೋಜನ ವನ್ನು ಬುಧವಾರ ಅಪರಾಹ್ನ ತಮ್ಮ ಹೊಲಗಳಿಗೆ ತಂದು ಮೊದಲು ಭೂತಾಯಿಗೆ ನಮಿಸುವ ಮೂಲಕ ಚರಗವನ್ನು ಜಮೀನಿನ ತುಂಬೆಲ್ಲಾ ಬೆಳೆಗಳಿಗೆ ಅರ್ಪಿಸಿ, ಮುತ್ತೆöÊದೆಯರಿಗೆ ಉಡಿ ತುಂಬಿ ಭಕ್ತಿ,ಭಾವದಿಂದ ಭೂಮಾತೆಗೆ ನಮಿಸಿ ಸಂತಸಪಟ್ಟರು.

ಜವಾರಿ ಸವಿ ಭೋಜನ : ನಂತರ ರೈತರು ತಮ್ಮ ಬಂಧು, ಮಿತ್ರರೊಂದಿಗೆ ಭೂತಾಯಿಯ ಒಡಲಲ್ಲಿ ಕುಳಿತು ಹಬ್ಬದ ವಿಶಿಷ್ಟ ಬಗೆಯ ಭಕ್ಷö್ಯ, ಭೋಜನಗಳನ್ನು ಸವಿದರು.ಪಟ್ಟಣದ ಕೃಷಿ ಸಹಕಾರಿ ಸಂಘದ ನಿವೃತ್ತ ವ್ಯವಸ್ಥಾಪಕ ಶಿವಪುತ್ರಪ್ಪ ಹುಂಡೇಕಾರ ಅವರು, ಹೊರವಲಯದ ತಮ್ಮ ಜಮೀನಿಗೆ ಆತ್ಮೀಯ ಬಂಧು, ಮಿತ್ರರನ್ನು ಕರೆದೊಯ್ದು ಚರಗದ ಸಿಹಿ ಭೋಜನದ ಸವಿ ಉಣ ಬಡಿಸಿದರು. ಬೆಳೆಯ ಸಮೃದ್ಧಿ ತುಂಬಿದ ಹೊಲದಲ್ಲಿ ಭೂತಾಯಿಗೆ ನಮಿಸಿ, ಬಂಧು ಪರಿವಾರಕ್ಕೆ ಜವಾರಿ ಭೋಜನ ಉಣಿಸುವುದು ನಿಜಕ್ಕೂ ಕೃಷಿಕರಿಗೆ ಸಾರ್ಥಕ ಭಾವ ಎನ್ನುತ್ತಾರೆ ಶಿವಪುತ್ರಪ್ಪ.