ಚಾಮರಾಜನಗರ: ಹನೂರು ತಾಲ್ಲೂಕಿನ ಪಿ.ಜಿ ಪಾಳ್ಯ ಬಳಿ ಸೋಮವಾರ ಮಧ್ಯಾಹ್ನ ಸಾರಿಗೆ ಬಸ್ ಹಳ್ಳಕ್ಕೆ ಉರುಳಿ ಬಿದ್ದು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪಿ.ಜಿ ಪಾಳ್ಯದಿಂದ ಮಾಳಿಗನತ್ತ ಮಾರ್ಗವಾಗಿ ಮಧ್ಯಾಹ್ನ ಹೊರಟ ಸಾರಿಗೆ ಬಸ್ ಮಾಳಿಗನತ್ತ ಸೇತುವೆ ಬಳಿ ಆಕ್ಸಲ್ ತುಂಡಾಗಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಬಸ್ಸಿನಲ್ಲಿ ಸುಮಾರು 60 ಪ್ರಯಾಣಿಕರಿದ್ದರು ಎನ್ನಲಾಗಿದೆ. ವೃದ್ಧೆಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗುತ್ತಿದೆ.