Saturday, December 14, 2024
Homeಕಲ್ಯಾಣ ಕರ್ನಾಟಕಕಲಬುರ್ಗಿಅಜಾನ್ ಗೆ ಪ್ರತಿಯಾಗಿ ಭಜನೆ: ಶ್ರೀರಾಮಸೇನೆ ಕಾರ್ಯಕರ್ತರ ಬಂಧನ

ಅಜಾನ್ ಗೆ ಪ್ರತಿಯಾಗಿ ಭಜನೆ: ಶ್ರೀರಾಮಸೇನೆ ಕಾರ್ಯಕರ್ತರ ಬಂಧನ

ಕಲಬುರಗಿ: ಮಸೀದಿಗಳಲ್ಲಿ ಹೆಚ್ಚಿಗೆ ಶಬ್ದ ಬರುವ ಮೈಕ್ ಬಳಸಿ ಆಜಾನ್ ಮಾಡುವುದಕ್ಕೆ ಪ್ರತಿಯಾಗಿ ಹನುಮಾನ್ ಮಂದಿರದ ಬಳಿ ಭಜನೆ ಮಾಡಿಕೊಂಡು ಹೊರಟಿದ್ದ ಶ್ರೀರಾಮ ಸೇನೆಯ ‌ಕಾರ್ಯಕರ್ತರನ್ನು ಪೊಲೀಸರು ಇಲ್ಲಿನ ಜಗತ್ ವೃತ್ತದಲ್ಲಿ ವಶಕ್ಕೆ ಪಡೆದರು.

ಮತ್ತೊಂದೆಡೆ ಸೂಪರ್ ಮಾರ್ಕೆಟ್ ಬಳಿ ಇರುವ ಮಸೀದಿಗೆ ದಲಿತ ಸೇನೆ ಕಾರ್ಯಕರ್ತರು ಕಾವಲಾಗಿದ್ದಾರೆ.

ಶ್ರೀರಾಮ ಸೇನೆ ಕಾರ್ಯಕರ್ತರು ಬರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು.‌

ಭಜನೆ ಶುರು‌ ಮಾಡುತ್ತಿದ್ದಂತೆಯೇ ಪೊಲೀಸರು ವಶಕ್ಕೆ ಪಡೆದರು. ಸೂಪರ್‌ ಮಾರ್ಕೆಟ್ ನಲ್ಲಿರುವ ಹನುಮಾನ್ ಮಂದಿರದ ಬಳಿ ಬ್ಯಾರಿಕೇಡ್ ಹಾಕಲಾಗಿದೆ.

ಕೋಮು ಗಲಭೆ ಎಬ್ಬಿಸುವ ಉದ್ದೇಶದಿಂದಲೇ ಶ್ರೀರಾಮಸೇನೆ ಉದ್ದೇಶಪೂರ್ವಕವಾಗಿ ಇಂತಹ ವಿವಾದ ಸೃಷ್ಟಿಸಲು ಮುಂದಾಗಿದೆ. ಆದ್ದರಿಂದ ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಅವರನ್ನು ಬಂಧಿಸಬೇಕು ಎಂದು ದಲಿತ ಸೇನೆಯ ಅಧ್ಯಕ್ಷ ಹಣಮಂತ ಯಳಸಂಗಿ ಒತ್ತಾಯಿಸಿದರು.