ಮೈಸೂರು: ಇಲ್ಲಿನ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರ ಪರ ಹಾಗೂ ವಿರೋಧ ಪ್ರತಿಭಟನೆಗಳು ಮಂಗಳವಾರ ನಗರದಲ್ಲಿ ನಡೆಯಿತು.
ಕೊಡವ ಸಮಾಜ, ಮೈಸೂರು ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಡ್ಡಂಡ ಕಾರ್ಯಪ್ಪ ಪರ ಪ್ರತಿಭಟನೆ ನಡೆಸಿದರು. ಪೃಗತಿಪರರು ಎಂದು ಕರೆಸಿಕೊಳ್ಳುವ ಕೆಲವರು ಕಾರ್ಯಪ್ಪ ಅವರಿಗೆ ತೊಂದರೆ ಕೊಡುತ್ತಿದ್ದಾರೆ. ರಂಗಾಯಣದ ಆವರಣದಲ್ಲಿ ನಿತ್ಯ ಪ್ರತಿಭಟನೆ ನಡೆಸುವ ಮೂಲಕ ಕಲಾ ಚಟುವಟಿಕೆಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಪ್ರತಿಭಟನನಿರತರು ಆರೋಪಿಸಿದರು.
ರಂಗಾಯಣ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟಗಾರರು ಕುಕ್ಕರಹಳ್ಳಿ ಕೆರೆಯಿಂದ ರಂಗಾಯಣದವರೆಗೂ ಅಡ್ಡಂಡ ಕಾರ್ಯಪ್ಪ ವಜಾಗೆ ಆಗ್ರಹಿಸಿ ಪ್ರತಿಭಟನ ಜಾಥಾ ನಡೆಸಿದರು.
ರಂಗಾಯಣದ ಆವರಣದಲ್ಲಿ ಕಳೆದ 8 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ನಿಲ್ಲಿಸಿ ಬೇರೆ ಕಡೆ ಪ್ರತಿಭಟನೆ ಮಾಡಬೇಕು ಎಂದು ಪೊಲೀಸರು ಮಾಡಿರುವ ಮನವಿಯನ್ನು ಪ್ರತಿಭಟನಕಾರರು ತಿರಸ್ಕರಿಸಿದ್ದಾರೆ.