Monday, May 19, 2025
Homeರಾಜ್ಯಕಾರವಾರಅನಿಲ ಟ್ಯಾಂಕರ್ ಪಲ್ಟಿ: ಕುಮಟಾದಲ್ಲಿ ತಪ್ಪಿದ ಅಪಾಯ

ಅನಿಲ ಟ್ಯಾಂಕರ್ ಪಲ್ಟಿ: ಕುಮಟಾದಲ್ಲಿ ತಪ್ಪಿದ ಅಪಾಯ

ಕಾರವಾರ: ಕುಮಟಾ ಪಟ್ಟಣದ ಹೊನಮಾಂವ ದೇವಸ್ಥಾನದ ಬಳಿ ಜನವಸತಿ ಪ್ರದೇಶದಲ್ಲಿ ಮಂಗಳವಾರ, ಅನಿಲ ತುಂಬಿದ ಟ್ಯಾಂಕರ್, ಅದನ್ನು ಸಾಗಿಸುತ್ತಿದ‌್ದ ಲಾರಿಯಿಂದ ಕಳಚಿ ಬಿದ್ದಿದೆ.

ಮಂಗಳೂರಿನಿಂದ ಬೆಳಗಾವಿಗೆ ಸಾಗಿಸುತ್ತಿದ್ದಾಗ ಲಾರಿಯ ಸಂಪರ್ಕ ತಪ್ಪಿದ ಟ್ಯಾಂಕರ್ ಕೆಳಗೆ ಉರುಳಿತು. ಆಗ ಟ್ಯಾಂಕರ್‌ನ ಸುರಕ್ಷಿತ ವಾಲ್ವ್ ಸಡಿಲಗೊಂಡು ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆ ಉಂಟಾಗಿತ್ತು. ಅದನ್ನು ತಕ್ಷಣ ನಿಲ್ಲಿಸಲಾಯಿತು. ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಪಟ್ಟಣದ ಗಿಬ್ ವೃತ್ತದ ಸಿದ್ದಾಪುರ – ಚಂದಾವರ ಮಾರ್ಗ ಮೂಲಕ ಹೊನ್ನಾವರದ ಎಲ್.ಐ.ಸಿ ಕಚೇರಿ ಬಳಿ ಹೆದ್ದಾರಿ ಸಂಪರ್ಕಿಸುವಂತೆ ಕ್ರಮ ಕೈಗೊಳ್ಳಲಾಯಿತು.

ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನೆರವು‌ ನೀಡಿದರು ಎಂದು ಪಿ.ಎಸ್.ಐ ನವೀನ್ ನಾಯ್ಕ ಮಾಹಿತಿ‌ ನೀಡಿದರು.