Saturday, December 14, 2024
Homeಬೆಂಗಳೂರು ವಿಭಾಗರಾಮನಗರಅಪಘಾತ: ಜಮ್ಮು ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿ‌ ಸಾವು

ಅಪಘಾತ: ಜಮ್ಮು ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿ‌ ಸಾವು

ರಾಮನಗರ: ಮಾಗಡಿ ತಾಲ್ಲೂಕಿನ ಜೋಡುಗಟ್ಟೆ ಗೇಟ್ ಬಳಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆಕಾಂಕ್ಷ ಗುಪ್ತ (26) ಮೃತಪಟ್ಟಿದ್ದಾರೆ. ಏಳು ಮಂದಿ ಗಾಯಗೊಂಡಿದ್ದಾರೆ.ಬೆಂಗಳೂರಿನ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು ಎರಡು ಕಾರ್ ಗಳಲ್ಲಿ ಸಾವನದುರ್ಗ ಪ್ರವಾಸಕ್ಕೆ ಬಂದಿದ್ದು, ಮುಂಜಾನೆ 3.30ರ ಸುಮಾರಿಗೆ ಮಾಗಡಿ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಯಿತು. ಅಪಘಾತದಲ್ಲಿ ಜಮ್ಮು ಮೂಲದ ವಿದ್ಯಾರ್ಥಿನಿ ಆಕಾಂಕ್ಷ ಸ್ಥಳದಲ್ಲಿ ಸಾವನ್ನಪ್ಪಿದರು. ಆಶೀಶ್ ರಾಜಾ, ದಿವ್ಯಾಂಶು, ಆಶುತೋಷ್, ದರ್ಶನ್, ಯಶೋವರ್ಧನ್ ಸಿಂಗ್, ಭವ್ಯಾ ಎಂಬುವರು ಗಾಯಗೊಂಡಿದ್ದಾರೆ.