ನಂಜನಗೂಡು: ನಗರದ ಮೈಸೂರು ರಸ್ತೆಯ ದೇವರಾಜ ಅರಸು ಸೇತುವೆಯ ಬಳಿ ಪಲ್ಸರ್ ಬೈಕ್ ಗೆ ಗೂಡ್ಸ್ ಟೆಂಪೊ ಡಿಕ್ಕಿ ಹೊಡೆದು ನಿವೃತ್ತ ಸೈನಿಕ ರಾಘವೇಂದ್ರ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೈಸೂರಿನ ಹೆಬ್ಬಾಳ್ ನಿವಾಸಿ ರಾಘವೇಂದ್ರ ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು, ಬೈಕ್ ನಲ್ಲಿ ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಗೂಡ್ಸ್ ಟೊಂಪೊ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ನಂತರ ಟೊಂಪೊ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಮೃತರಿಗೆ ಪತ್ನಿ ಹಾಗೂ 2 ವರ್ಷದ ಮಗ, 6 ತಿಂಗಳ ಹೆಣ್ಣು ಮಗುವಿದೆ.
ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ.ಲೋಹಿತ್ ಭೇಟಿ ನೀಡಿ ಮಹಜರು ನಡೆಸಿದರು. ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.