ಉಡುಪಿ: ಆಗುಂಬೆ ಘಾಟಿಯ 8ನೇ ತಿರುವಿನಲ್ಲಿ ಸರಕು ಸಾಗಣೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಯ ಮೇಲೇರಿ ನಿಂತಿದೆ.
ಸ್ವಲ್ಪ ಮುಂದೆ ಹೋಗಿದ್ದರು ಲಾರಿ ಬೃಹತ್ ಕಂದಕಕ್ಕೆ ಉರುಳುವ ಅಪಾಯವಿತ್ತು. ಅದೃಷ್ಟವಶಾತ್ ಅನಾಹುತ ತಪ್ಪಿದ್ದು, ಚಾಲಕ ಹಾಗೂ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169 ಎ ರಸ್ತೆ ಇದಾಗಿದ್ದು, ಉಡುಪಿ-ಶಿವಮೊಗ್ಗ ಜಿಲ್ಲೆಗಳನ್ನು ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ.