Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಆಟಿಕೆ ಜೀಪ್‌ ಖರೀದಿಸಿದ ಮುಖ್ಯಮಂತ್ರಿ

ಆಟಿಕೆ ಜೀಪ್‌ ಖರೀದಿಸಿದ ಮುಖ್ಯಮಂತ್ರಿ

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿ ಕಟ್ಟಿಗೆಯಿಂದ ಸಿದ್ಧಪಡಿಸಿದ 2 ರೀತಿಯ ಪುಟ್ಟ ಆಟಿಕೆ ಜೀಪ್‌ಗಳನ್ನು ಖರೀದಿಸಿದ್ದು ಗಮನಸೆಳೆಯಿತು.

ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜೀವನೋಪಾಯ ಅಭಿಯಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ ನಗರದ ಸರ್ದಾರ್‌ ಪ್ರೌಢಶಾಲೆ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ವೀಕ್ಷಿಸಿದರು.

ಈ ವೇಳೆ, ಚನ್ನಪಟ್ಟಣದ ಬೊಂಬೆ ಮಾರಾಟ ಮಳಿಗೆಯಲ್ಲಿ ಜೀಪುಗಳನ್ನು ಖರೀದಿಸಿದರು. ಇದಕ್ಕೆ ₹ 600 ಪಾವತಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಇದ್ದರು.