Saturday, December 14, 2024
Homeವಿಡಂಬನೆಆಡಿ ಕಾರ್‌ಗೆ 5 ರೂಪಾಯಿ ಡೌನ್‌ ಪೇಮೆಂಟ್‌ !

ಆಡಿ ಕಾರ್‌ಗೆ 5 ರೂಪಾಯಿ ಡೌನ್‌ ಪೇಮೆಂಟ್‌ !

“ಸಾರ್ ಒಂದು ಆಡಿ ಕಾರ್ ಬೇಕಿತ್ತು. ದರ ಹೇಗೆ?”

“32 ಲಕ್ಷ, 45 ಲಕ್ಷ, 57 ಲಕ್ಷ ರೂಪಾಯಿ…ಯಾವುದು ಆಗಬಹುದು ಮೇಡಂ?”

“57 ರದ್ದೇ ಇರಲಿ…ನನಗೆ ಎಲ್ಲವೂ ಕಾಸ್ಟ್ಲಿಯೇ ಇರಬೇಕು…”

“ಲೋನ್ ಅಲ್ವಾ? ನಮ್ಮಲ್ಲೇ ಲೋನ್ ಫೆಸಿಲಿಟಿಯೂ ಇದೆ….ಯಾವ ರೀತಿಯ ಲೋನ್ ಬೇಕು? ಡೌನ್ ಪೇಮೆಂಟ್ ಎಷ್ಟು ಮಾಡ್ತೀರಿ”

“ಸಾರ್ ಡೌನ್ ಪೇಮೆಂಟ್ 5 ರೂಪಾಯಿ ಕೊಡ್ತೀನಿ…ಯಾವ ಸ್ಕೀಂ ಅಡಿಯಲ್ಲಿ ಬರುತ್ತೆ”

“ಏನು? ಐದ್ರೂಪಾಯಾ? ಯಾವ ಹುಚ್ಚಾಸ್ಪತ್ರೆಯಿಂದ ಫೋನ್ ಮಾಡ್ತಿದೀಯ? ತಲೆ ಗಿಲೆ ನೆಟ್ಗೈತಾ ನಿಂಗೆ?”

“ಅದೇ ಮೋಜೀದಿ ಪೆಟ್ರೋಲ್ ರೇಟ್ ಐದ್ರೂಪಾಯಿ ಕಮ್ಮಿ ಮಾಡಿದ್ರಲ್ಲಾ! ಆ 5 ರೂಪಾಯಿ ಡೌನ್ ಪೇಮೆಂಟ್ ಮಾಡ್ತೀನಿ”

“ಗ್ಯಾರಂಟಿ ನಿಂಗೆ ತಲೆ ಕೆಟ್ಟಿದೆ.!”

“ಮತ್ತದೇನು? ನ್ಯೂಸ್ ಚಾನಲ್‌ನಾಗೆ, ಮೋದಿಜಿ ಕಡೆಯವರು ಎಲ್ರೂ ‘ದೀಪಾವಳಿಗೆ ಮೋಜೀದಿ ಭರ್ಜರಿ ಗಿಫ್ಟ್’ ಅಂತವ್ರೆ…5 ರೂಪಾಯಿ ಭರ್ಜರಿ ಅಂದಮೇಲೆ ಆ 5 ರೂಪಾಯನ್ನು ಆಡಿ ಕಾರಿಗೆ ಡೌನ್ ಪೇಮೆಂಟ್ ತಗಳಕೆ ನಿಮ್ಗೇನು ದೊಡ್ರೋಗ? ನಿಮ್ಮಕ್ಕೆ ದ್ವಾಸೆ ಹುಯ್ಯಾ”

ಪಾಪ…ಆಗ ಕೋಮಾಗೆ ಹೋದ ಷೋ ರೂಮ್ ಮ್ಯಾನೇಜರ್‌ ಇನ್ನೂ ಎದ್ದಿಲ್ಲಂತೆ