ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ನಲ್ಲಿ ಶನಿವಾರ ರಾತ್ರಿ ಡಬಲ್ ಮರ್ಡರ್ ನಡೆದಿದೆ. ತಾಲೂಕಿನ ಚಂದಾಪುರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಆತನ ಜತೆಗೆ ವಾಸವಾಗಿದ್ದ ತನ್ನ ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ
ಪಕ್ಷವೊಂದರ ಮುಖಂಡ ಚಿಕ್ಕಹಾಗಡೆ ನಾರಾಯಣಸ್ವಾಮಿ ತನ್ನ ಪ್ರೇಯಸಿ ಕಾವ್ಯಳೊಂದಿಗೆ ಬಾಡಿಗೆ ಮನೆಯಲ್ಲಿದ್ದ ವೇಳೆ ಹತ್ಯೆ ಮಾಡಲಾಗಿದೆ.
ಇಬ್ಬರು ಮನೆಯಲ್ಲಿದ್ದ ವೇಳೆ ರೊಚ್ಚಿಗೆದ್ದ ಕಾವ್ಯಳ ಗಂಡ ಇಬ್ಬರನ್ನು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಕೆ ಡಾಭಾ ಎದುರಿನ ರಸ್ತೆಯ ಪಕ್ಕದಲ್ಲಿ ಶೀಟ್ ಮನೆಯಲ್ಲಿ ಇಬ್ಬರು ಇದ್ದರು ಎಂದು ತಿಳಿದು ಬಂದಿದೆ.