Saturday, December 14, 2024
Homeಕ್ರೀಡೆಕ್ರಿಕೆಟ್ಆರ್‌ಸಿಬಿ ನಾಯಕತ್ವ ಯಾರಿಗೆ?

ಆರ್‌ಸಿಬಿ ನಾಯಕತ್ವ ಯಾರಿಗೆ?

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2022ರ ಐಪಿಎಲ್ ಆವೃತ್ತಿಗಾಗಿ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವ ಹರಾಜು ಪ್ರಕ್ರಿಯೆಗಾಗಿ ಆರ್ ಸಿ ಬಿ ತನ್ನಲ್ಲೇ ಉಳಿಸಿಕೊಳ್ಳುವ ಆಟಗಾರರನ್ನು ಆಯ್ಕೆ ಮಾಡಿದೆ.

Photo: @royalchallengersbangalore

ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ತಂಡವು ಉಳಿಸಿಕೊಂಡು ಉಳಿದ ಆಟಗಾರರನ್ನು ಕೈಬಿಟ್ಟಿದೆ.

ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಐಪಿಎಲ್ ಆವೃತ್ತಿಯಲ್ಲಿ 17 ಕೋಟಿ ಸಂಭಾವನೆ ಪಡೆದಿದ್ದರು. ಈ ಬಾರಿ 15 ಕೋಟಿ ಸಂಭಾವನೆಗೆ ಆಡಲು ಒಪ್ಪಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಚರ್ಚೆಗೆ ಈಡಾದ ವಿಷಯವೆಂದರೆ ಈ ಬಾರಿ ಆರ್ಸಿಬಿ ತಂಡವನ್ನು ಯಾರು ಮುನ್ನಡೆಸುತ್ತಾರೆ?. ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ಬಳಿಕ ತೆರೆವಾದ ಸ್ಥಾನಕ್ಕೆ ನಾಯಕನ ಆಯ್ಕೆ ನಡೆಯಬೇಕಿದೆ.

ಕನ್ನಡಿಗರಾದ ಕೆ. ಎಲ್. ರಾಹುಲ್ ಹೆಸರು ಕೂಡ ಕೇಳಿಬರುತ್ತಿದೆ. ಇನ್ನೂ ಕೆ.ಎಲ್. ರಾಹುಲ್ ಅವರು ಪಂಜಾಬ್ ತಂಡದಿಂದ ಹೊರಬಂದಿದ್ದಾರೆ. ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್, ಗ್ಲೆನ್ ಮ್ಯಾಕ್ಸ್ವೆಲ್ ಹೆಸರು ಕೂಡ ಕೇಳಿ ಬರುತ್ತಿದೆ.

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಆರ್ ಸಿ ಬಿ ತಂಡ ಹೊಂದಿದೆ. ನಾಯಕತ್ವದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.