Saturday, December 14, 2024
Homeಕ್ರೀಡೆಕ್ರಿಕೆಟ್ಈಗ ನಿಕ್ಕಿಯಾಯ್ತು ನೋಡಿ… ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡ ಕೆ.ಎಲ್‌. ರಾಹುಲ್‌ – ಅತಿಯಾ ಶೆಟ್ಟಿ

ಈಗ ನಿಕ್ಕಿಯಾಯ್ತು ನೋಡಿ… ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡ ಕೆ.ಎಲ್‌. ರಾಹುಲ್‌ – ಅತಿಯಾ ಶೆಟ್ಟಿ

ಮುಂಬೈ: ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟಿ ಹಾಗೂ ಸುನಿಲ್ ಶೆಟ್ಟಿ ಅವರ ಪುತ್ರಿ ಆತಿಯಾ ಶೆಟ್ಟಿ ನಡುವಣ ಡೇಟಿಂಗ್ ಗಾಸಿಪ್‌ಗೆ ಇದೀಗ ತೆರೆಬಿದ್ದಿದೆ.

ಕೆ. ಎಲ್. ರಾಹುಲ್ – ಆತಿಯಾ ಶೆಟ್ಟಿ

ಬುಧವಾರ ಮುಂಬೈನಲ್ಲಿ ನಡೆದ ಸುನಿಲ್ ಶೆಟ್ಟಿ ಪುತ್ರ ಆಹಾನ್ ಶೆಟ್ಟಿಯ ತಡಪ್ ಚಿತ್ರದ ರೆಡ್ ಕಾರ್ಪೆಟ್ ಸ್ಕ್ರೀನಿಂಗ್‌ನಲ್ಲಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಜೋಡಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ಈ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಉಂಟು ಮಾಡಿದೆ.

ತಡಪ್ ನಲ್ಲಿ ಆಹಾನ್ ಶೆಟ್ಟಿ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದು, ತಾರಾ ಸುತಾರಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಸುನೀಲ್ ಶೆಟ್ಟಿ-ಮನಾ ಶೆಟ್ಟಿ, ಆಹಾನ್ ಶೆಟ್ಟಿ- ತಾನಿಯಾ ಶ್ರಾಫ್, ಕೆ. ಎಲ್. ರಾಹುಲ್ – ಆತಿಯಾ ಶೆಟ್ಟಿ

ಶೆಟ್ಟಿ ಕುಟುಂಬದ ಸದಸ್ಯರಾದ ಸುನೀಲ್ ಶೆಟ್ಟಿ, ಪತ್ನಿ ಮನಾ ಶೆಟ್ಟಿ, ಮಗ ಆಹಾನ್ ಶೆಟ್ಟಿ, ಆತನ ಗರ್ಲ್ ಫ್ರೆಂಡ್ ತಾನಿಯಾ ಶ್ರಾಫ್, ಆತಿಯಾ ಶೆಟ್ಟಿ ಜತೆ ಕೆ. ಎಲ್. ರಾಹುಲ್ ಫ್ಯಾಮಿಲಿ ಫೋಟೋಗೆ ಪೋಸ್ ನೀಡಿದ್ದು ಇದೀಗ ರಾಹುಲ್ ಆತಿಯಾ ಲವ್ ಸ್ಟೋರಿಗೆ ಅಧಿಕೃತ ಮುದ್ರೆ ಒತ್ತಿದಂತೆ. ಅಭಿಮಾನಿಗಳು ಫ್ಯಾಮಿಲಿ ಪರ್ಫೆಕ್ಟ್ ಅಂತ ಹೊಗಳುತ್ತಿದ್ದಾರೆ.