Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಉಚ್ಚಂಗಿದುರ್ಗದ ಉತ್ಸವಾಂಬೆಯ ಕ್ಷೇತ್ರದಲ್ಲಿ ಸಂಭ್ರಮದ ನವರಾತ್ರಿ ಉತ್ಸವಕ್ಕೆ ಚಾಲನೆ

ಉಚ್ಚಂಗಿದುರ್ಗದ ಉತ್ಸವಾಂಬೆಯ ಕ್ಷೇತ್ರದಲ್ಲಿ ಸಂಭ್ರಮದ ನವರಾತ್ರಿ ಉತ್ಸವಕ್ಕೆ ಚಾಲನೆ

ದಾವಣಗೆರೆ: ರಾಜ್ಯದ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಉಚ್ಚಂಗಿದುರ್ಗದಲ್ಲಿ ನವರಾತ್ರಿ ಮಹೋತ್ಸವಕ್ಕೆ ಗುರುವಾರ ಸಂಜೆ ಸಂಭ್ರಮದ ಚಾಲನೆ ದೊರೆತಿದೆ.

ಗುರುವಾರ ಸಂಜೆ ಉಚ್ಚoಗೆಮ್ಮನ ಉತ್ಸವ ಮೂರ್ತಿಯೊಂದಿಗೆ ಆನೆಹೊಂಡಕ್ಕೆ ಉತ್ಸವ ಮೂರ್ತಿಯು ಹೋಗಿಬಂದ ಮೇಲೆ ಶ್ರೀ ದೇವಿಗೆ ವಿಶೇಷವಾಗಿ ಅಲಂಕಾರ ಮಾಡಿ ಉತ್ಸವ ಮೂರ್ತಿಯನ್ನು ಕುದುರೆಯ ಮೇಲೆ ಘಟಸ್ಥಾಪನೆ ಮಾಡುವುದರೊಂದಿಗೆ ನವರಾತ್ರಿ ಮಹೋತ್ಸವ ಪ್ರಾರಂಭವಾಯಿತು.

ನವರಾತ್ರಿಯು 09 ದಿನಗಳ ಕಾಲ ನಡೆಯಲಿದ್ದು ದೇವಸ್ಥಾನವನ್ನು ವಿದ್ಯುತ್ ದೀಪ, ಬಾಳೆಕಂಬ, ಹೂವು, ತರಕಾರಿ, ಮಾವಿನ ಸೊಪ್ಪಿನ ಅಲಂಕಾರದಿಂದ ಸಿಂಗರಿಸಲಾಗಿದೆ.

ಅ.15ರ ವರೆಗೆ ದಸರಾ ಮಹೋತ್ಸವದ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆಗಳು ನಡೆಯಲಿದೆ.

ಎಲ್ಲಾ ಭಕ್ತರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರದೊಂದಿಗೆ ದಸರಾ ಆಚರಿಸೋಣ ಎಂದು ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ತಿಳಿಸಿದ್ದಾರೆ.