Saturday, December 14, 2024
Homeರಾಜ್ಯಕಲ್ಯಾಣ ಕರ್ನಾಟಕಉಡಾ ಮಾರಾಟಕ್ಕಿದೆ ಎಂದು ಸ್ಟೇಟಸ್‌ ಹಾಕಿ ಸಿಕ್ಕಿಬಿದ್ದ ಆರೋಪಿ

ಉಡಾ ಮಾರಾಟಕ್ಕಿದೆ ಎಂದು ಸ್ಟೇಟಸ್‌ ಹಾಕಿ ಸಿಕ್ಕಿಬಿದ್ದ ಆರೋಪಿ

ವಿಜಯನಗರ: ಉಡಾ ಮಾರಾಟಕ್ಕಿದೆ ಎಂದು ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದ ವ್ಯಕ್ತಿಯನ್ನು ಹೊಸಪೇಟೆಯ ಅರಣ್ಯ ಇಲಾಖೆಯವರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಹೊಸಪೇಟೆ ತಾಲ್ಲೂಕಿನ 82 ಡಣಾಪುರ ಗ್ರಾಮದ ಹುಲುಗಪ್ಪ, ಜೀವಂತ ಉಡಾ ಹಾಗೂ ಅದರ ಸಾಗಣೆಗೆ ಬಳಸಿದ್ದ ಬೈಕ್‌ ಅನ್ನು ವಶಪಡಿಸಿಕೊಂಡಿದ್ದಾರೆ. ವಲಯ ಅರಣ್ಯ ಅಧಿಕಾರಿ ಕೆ.ಸಿ. ವಿನಯ್‌, ಉಪ ವಲಯ ಅರಣ್ಯ ಅಧಿಕಾರಿ ಶಿವಕುಮಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಹುಲುಗಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

‘ವನ್ಯಜೀವಿಗಳ ಬೇಟೆ, ಮಾರಾಟದ ಮೇಲೆ ನಿರ್ಬಂಧ ಇದೆ. ಅದನ್ನು ಮೀರಿ ಉಡಾ ಮಾರಾಟಕ್ಕೆ ಮುಂದಾಗಿದ್ದ ಹುಲುಗಪ್ಪನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ವಲಯ ಅರಣ್ಯ ಅಧಿಕಾರಿ ಕೆ.ಸಿ. ವಿನಯ್‌ ತಿಳಿಸಿದ್ದಾರೆ.