ಬೆಳಗಾವಿ: ಭಾರತವು 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಜಯ ಸಾಧಿಸಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ ಮರಾಠಾ ಲಘು ಪದಾತಿ ದಳ ಕೇಂದ್ರ (ಎಂ.ಎಲ್.ಐ.ಆರ್.ಸಿ)ದಲ್ಲಿ ಗುರುವಾರ ‘ವಿಜಯ ದಿವಸ’ ಆಚರಿಸಲಾಯಿತು.
ಕರ್ನಾಟಕ ಹಾಗೂ ಕೇರಳ ಉಪ ಕ್ಷೇತ್ರದ ಜನರಲ್ ಕಮಾಂಡಿಂಗ್ ಆಫೀಸರ್
ಮೇಜರ್ ಜನರಲ್ ಜೆ.ವಿ. ಪ್ರಸಾದ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು.
ಎಂಎಲ್ಐಆರ್‌ಸಿ ಕಮಾಂಡೆಂಟ್
ಬ್ರಿಗೇಡಿಯರ್ ರೋಹಿತ್ ಚೌಧರಿ, ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಭಾಗವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ
ಮುಖ್ಯಮಂತ್ರಿಯು ನಿಗದಿತ ಸಮಯಕ್ಕಿಂತ ಅರ್ಧ ತಾಸು ತಡವಾಗಿ ಬಂದಿದ್ದರಿಂದಾಗಿ, ಸೈನಿಕರು, ಮಾಜಿ ಸೈನಿಕರು, ಅವರ ಕುಟುಂಬದಬರು, ಎನ್‌ಸಿಸಿ ಕೆಡೆಟ್‌ಗಳು ಹಾಗೂ ಸಿಬ್ಬಂದಿ ಕಾಯಬೇಕಾಯಿತು.