Saturday, December 14, 2024
Homeಗ್ಯಾಲರಿಕಂಗನಾ ರಣಾವತ್ ದೇಶದ್ರೋಹಿ ಹೇಳಿಕೆಗೆ ವ್ಯಾಪಕ ಖಂಡನೆ

ಕಂಗನಾ ರಣಾವತ್ ದೇಶದ್ರೋಹಿ ಹೇಳಿಕೆಗೆ ವ್ಯಾಪಕ ಖಂಡನೆ


ನವದೆಹಲಿ: ಭಾರತಕ್ಕೆ 1947ರಲ್ಲಿ ಸಿಕ್ಕಿರೋದು ಭಿಕ್ಷೆ. ನಿಜವಾದ ಸ್ವಾತಂತ್ರ್ಯ ಬಂದಿರೋದು 2014ರಲ್ಲಿ ಎಂದು ಹೇಳುವ ಮೂಲಕ ಭಾರತದ ಸ್ವಾತಂತ್ರ್ಯವನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನ ಮಾಡಿದ್ದ ನಟಿ ಕಂಗನಾ ರಣಾವತ್‌ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇದು ದೇಶದ್ರೋಹದ ಹೇಳಿಕೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಲಕ್ಷಾಂತರ ಜನ ಕಂಗನಾ ಹೇಳಿಕೆಯನ್ನು ಖಂಡಿಸಿದ್ದರು. ಆ ಮಹಿಳೆಗೆ ಭಗತ್ ಸಿಂಗ್‌ರಂತ ಬ್ರಿಟಿಷರಿಗೆ ಕ್ಷಮೆ ಕೇಳದ ಹುತಾತ್ಮರ ಬಗ್ಗೆ ನೆನಪಿಸಿ ಎಂದು ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಹೇಳಿದ್ದಾರೆ.

ಬಾಲಿವುಡ್‌‌ ನಟಿ ಕಂಗನಾ ರಣಾವತ್‌ ‘ಭಾರತದ ಸ್ವಾತಂತ್ಯ್ರ’ದ ಕುರಿತು ನೀಡಿರುವ ಹೇಳಿಕೆಯ ವಿರುದ್ದ ಗುರುವಾರ ಮುಂಬೈನಲ್ಲಿ ದೂರು ದಾಖಲಾಗಿದೆ. ಆಮ್ ಆದ್ಮಿ ಪಕ್ಷ(ಎಎಪಿ)ದ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಪ್ರೀತಿ ಮೆನನ್ ಅವರು ಈ ದೂರು ದಾಖಲಿಸಿದ್ದು, ಅವರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜನರಿಗಾಗಿ ದುಡಿದ ಸೋನು ಸೂದುಗೆ ಐಟಿ ರೈಡ್‌, ಬಿಜೆಪಿಗಾಗಿ ದುಡಿದ ಕಂಗನಾ ರಣಾವತ್‌ಗೆ ಪದ್ಮಶ್ರೀ. ಇದುವೇ ಮೋದಿ ಕೊಡುಗೆ. ಪದ್ಮಶ್ರೀ ಪ್ರಶಸ್ತಿ ಪಡೆದ ಬಳಿಕ ಆಕೆ ನೀಡುತ್ತಿರುವ ಹೇಳಿಕೆಗೆ ಭಾರತ ರತ್ನ ಕೊಡಬೇಕು ಎಂದು ಹಲವರು ಕಿಚಾಯಿಸಿದ್ದಾರೆ.



ರಾಜಕೀಯ ಆಯಾಮ ಅರ್ಥವಾಗಲಿ: ನಾಗೇಗೌಡ ಶಿವಲಿಂಗಯ್ಯ ವಿಶ್ಲೇಷಣೆ

ಕಂಗನಾ ರಣಾವತ್ ಕ್ಷತ್ರಿಯ ಸಮುದಾಯದ ಹೆಣ್ಣು ಮಗಳು. ಈ ಕ್ಷತ್ರಿಯ ಸಮುದಾಯದವರು ಬ್ರಾಹ್ಮಣರು, ಬನಿಯಾ, ಕಾಯಸ್ಥರು ಜೊತೆಗೆ ಸೇರಿಕೊಂಡು ರಾಜ್ಯಭಾರ ಮಾಡಿಕೊಂಡು ಇದ್ದರು. ಬ್ರಿಟಿಷರವರು ಬಂದು ಇವರೆಲ್ಲರನ್ನು ಬಡಿದು ಬಾಯಿಗೆ ಹಾಕಿಕೊಂಡು ರಾಜ್ಯಭಾರ ನಡೆಸಿದರು. ಈ ಕ್ಷತ್ರಿಯ ಸಮುದಾಯದವರು ಬ್ರಿಟಿಷನವರ ವಿರುದ್ಧ ಕೆಮ್ಮುವುದನ್ನು ಬಿಟ್ಟು ಬ್ರಿಟಿಷನವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸಾಮಂತ ರಾಜರು ತರ ಬದುಕಿಕೊಂಡರು.
ಬ್ರಿಟಿಷರವರು ಬಂದಮೇಲೆ ಸೈಲೆಂಟ್ ಆಗಿ ಬ್ರಾಹ್ಮಣರು, ಬನಿಯಾ. ಕಾಯಸ್ಥರು ಇಂಗ್ಲಿಷ್ ಕಲಿತುಕೊಂಡು ಬ್ರಿಟಿಷರವರ ಜೊತೆಗೆ ಕುಚಿಕು ಪ್ರೆಂಡ್ಸ ಗಳು ಆಗಬುಟ್ಟರು. ಬ್ರಿಟಿಷರವರ ರಾಜ್ಯಭಾರದಲ್ಲೂ ಈ ಮೂರು ಜಾತಿಯವರೇ, ರಾಜರುಗಳ ಆಸ್ಥಾನದಲ್ಲೂ ಈ ಜಾತಿಯವರದೇ ರಾಜ್ಯಭಾರ.

ಯಾವಾಗ ಕಾಂಗ್ರೆಸ್ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ ಜೋರಾಗಿ ಬ್ರಿಟಿಷರವರು ಕಾಂಗ್ರೆಸ್ ನವರಿಗೆ ಅಧಿಕಾರ ಕೊಟ್ಟು ಜಾಗ ಖಾಲಿ ಮಾಡಿದರು, ಆಗ ಸುಮಾರು ರಾಜರ ಹತ್ತಿರ ಬ್ರಾಹ್ಮಣರಾಗಿದ್ದ ದಿವಾನರುಗಳು ಕ್ಷತ್ರಿಯರನ್ನು ಮುಂದೆ ಇಟ್ಟುಕೊಂಡು ಆಡಿದ ಆಟ ಅಷ್ಟಿಷ್ಟಲ್ಲ. ಬ್ರಾಹ್ಮಣರಾದ ದಿವಾನರು, ಹಿಂದೂ ಮಹಾಸಭಾದ ಸಾವರ್ಕರ್, ಮುಂಜಿ ಎಲ್ಲ ಸೇರಿಕೊಂಡು ಈ ರಾಜರ ತಲೆ ತಿದ್ದಿ ಆಡಿದ ರಾಜಕೀಯ ಆಟವನ್ನು ನೀವುಗಳು ಓದಬೇಕು. ಆಗ ಇವರುಗಳ ನಿಜ ಬಣ್ಣ ನಿಮಗೆ ಅರ್ಥವಾಗುತ್ತದೆ.

ನಮ್ಮ ಮೈಸೂರು ಜಯಚಾಮರಾಜೇಂದ್ರ ಒಡೆಯರ್ ರನ್ನು ಸೇರಿದಂತೆ ಹಲವಾರು ರಾಜರು ಹಿಂದೂ ಮಹಾಸಭಾ, ವಿಶ್ವ ಹಿಂದೂ ಪರಿಷತ್, ಆರೆಸ್ಸೆಸ್, ಜನಸಂಘ, ಬಿಜೆಪಿ ಎಲ್ಲ ಸಂಘಟನೆಗಳಿಗೆ ಕೊಟ್ಟಿರುವ ಆರ್ಥಿಕ ನೆರವನ್ನು ನೋಡಿದರೆ ತಲೆ ಸುತ್ತು ಬರುತ್ತೆ. ಒಟ್ಟಾರೆ ನಮ್ಮ ರಾಜರುಗಳು ಇವತ್ತಿನ ಹಿಂದೂತ್ವ ಏನಿದೆ ಅದರ ಪೋಷಕರು ಆಗಿದ್ದರು.
ದುರಂತ ಏನಾಪ್ಪಾ ಅಂದರೆ ಈ ಕ್ಷತ್ರಿಯ ವರ್ಗದವರು ಬ್ರಾಹ್ಮಣರು, ಬನಿಯಾ, ಕಾಯಸ್ಥರ ತರ ಇಂಗ್ಲಿಷ್ ಕಲಿತು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಹೊಂದಿಕೊಳ್ಳದೆ ಹಿಂದೆ ಉಳಿದರು. ಒಂದಷ್ಟು ರಾಜರು ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ ಕಂಡುಕೊಂಡರು.

ಆದಿತ್ಯನಾಥ ಉತ್ತರ ಪ್ರದೇಶದಲ್ಲಿ ಕ್ಷತ್ರಿಯ ಸಮುದಾಯವನ್ನು ಮೊಬಿಲೈಸ್‌ ಮಾಡಿದ್ದಾರೆ. ಆರ್ಥಿಕ ನೆರವಿಗಾಗಿ ಆರೆಸ್ಸೆಸ್ ಕಾಲದಿಂದಲೂ ಪ್ಯಾನ್‌ ಇಂಡಿಯಾ ಕ್ಷತ್ರಿಯ ನೆಟವರ್ಕ ಇಟ್ಟುಕೊಂಡಿತ್ತು.

ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡಮೇಲು ಮಾಡಲು ಹಿಂದೂತ್ವದ ಬ್ರಾಹ್ಮಣರು, ಬನಿಯಾ, ಕಾಯಸ್ಥರು ಮತ್ತು ಕ್ಷತ್ರಿಯರು ಪಿಲ್ಡಗೆ ಇಳಿದಿದ್ದಾರೆ. 1947 ರಲ್ಲಿ ಇವರ ಗುಂಪಿಗೆ ಶೂದ್ರರ, ದಲಿತರ ಬೆಂಬಲ ಇರಲಿಲ್ಲ. ಆದರೆ 2021 ರಲ್ಲಿ ನಾವೆಲ್ಲರೂ ಹಿಂದೂಗಳು ಅಂದುಕೊಂಡು ಶೂದ್ರರು, ದಲಿತರು ಇವರುಗಳ ಪರವಾಗಿ ನಿಂತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸುಲಭವಾಗಿ ಧಕ್ಕೆ ತರಬಲ್ಲದು.

ಇಷ್ಟುದ್ದ ಏಕೆ ಬರೆದೆ ಅಂದರೆ ಕಂಗನಾ ರಣಾವತ್ ಮಾತು, ಕ್ರಿಯೆಗಳ ಹಿಂದಿನ ರಾಜಕೀಯ ಆಯಾಮಗಳು ನಮಗೆಲ್ಲರಿಗೂ ಅರ್ಥವಾಗಲಿ ಎಂದು.