Saturday, December 14, 2024
Homeಕ್ರೀಡೆಕಣ್ಣೀರಿಡುತ್ತಲೇ ಬಾರ್ಸಿಲೋನಾ ತಂಡವನ್ನು ತೊರೆದ ಲಯೊನೆಲ್ ಮೆಸ್ಸಿ

ಕಣ್ಣೀರಿಡುತ್ತಲೇ ಬಾರ್ಸಿಲೋನಾ ತಂಡವನ್ನು ತೊರೆದ ಲಯೊನೆಲ್ ಮೆಸ್ಸಿ

ಬಾರ್ಸಿಲೋನಾ: ಅರ್ಜೆಂಟೀನಾದ ಹಿರಿಯ ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ, ಕಣ್ಣೀರಿಡುತ್ತಲೇ ಬಾರ್ಸಿಲೋನಾ ಎಫ್‌ಸಿ ತಂಡವನ್ನು ತೊರೆಯುವುದಾಗಿ ಘೋಷಿಸಿದ್ದಾರೆ.
ಬಾರ್ಸಿಲೋನಾ ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸಿರುವ ಮೆಸ್ಸಿ, ಯಾವತ್ತಿಗೂ ಈ ತಂಡವನ್ನು ತೊರೆಯಲು ಬಯಸುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಅನಿವಾರ್ಯವಾಗಿ ತಂಡವನ್ನು ತೊರೆಯುತ್ತಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ನಾನು ಅತೀವ ವಿನಯ ಹಾಗೂ ಗೌರವದಿಂದ ವರ್ತಿಸಲು ಪ್ರಯತ್ನಿಸಿದ್ದೇನೆ. ಬಾರ್ಸಿಲೋನಾ ತಂಡವನ್ನು ತೊರೆಯುವಾಗ ಇದೊಂದೇ ನನ್ನ ಬಳಿ ಉಳಿಯುತ್ತದೆ’ ಎಂದು ಹೇಳಿದ್ದಾರೆ.
ಮೆಸ್ಸಿ, ಬಾರ್ಸಿಲೋನಾ ತಂಡವನ್ನು ತೊರೆದಿರುವುದು ಕೋಟ್ಯಂತರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.34 ವರ್ಷದ ಮೆಸ್ಸಿ, ಕಳೆದ 21 ವರ್ಷಗಳಿಂದ ಬಾರ್ಸಿಲೋನಾ ತಂಡದ ಭಾಗವಾಗಿದ್ದು, ದಾಖಲೆಯ 682 ಗೋಲುಗಳನ್ನು ಗಳಿಸಿದ್ದಾರೆ. ಲಯೊನೆಲ್ ಮೆಸ್ಸಿ ಭವಿಷ್ಯದ ಯೋಜನೆಗಳು ಏನಾಗಲಿದೆ, ಯಾವ ತಂಡವನ್ನು ಸೇರಲಿದ್ದಾರೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.ವಿಶ್ವದಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ಆಟಗಾರ ಲಯೊನೆಲ್ ಮೆಸ್ಸಿ ಅವರೊಂದಿಗಿನ ಒಪ್ಪಂದ ಮುಂದುವರಿಸಲು ಬಾರ್ಸಿಲೋನಾ ಎಫ್‌ಸಿ ಆಸಕ್ತಿ ತೋರಿರಲಿಲ್ಲ ಎಂಬುದು ವರದಿಯಾಗಿತ್ತು.