ದಾವಣಗೆರೆ: ಪೊಲೀಸರ ಕಸ್ಟಡಿಯಲ್ಲಿದ್ದ ಕುಮಾರ್ ಎಂಬ ವ್ಯಕ್ತಿಯ ಸಾವಿನ ಹಿಂದೆ ಹಲವು ಅನುಮಾನಗಳಿವೆ. ಈ ಪ್ರಕರಣದ ನ್ಯಾಯಬದ್ಧ ತನಿಖೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ವತಿಯಿಂದ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಚಿತ್ರದುರ್ಗ ಜಿಲ್ಲೆ ಬಹದ್ದೂರ್ ಘಟ್ಟ ಗ್ರಾಮದ ಕುಮಾರ್ ಎಂಬವರನ್ನು ವಿಚಾರಣೆಗೆಂದು ದಾವಣಗೆರೆಯ ಸಿಇಎನ್ ವಶಕ್ಕೆ ಪಡೆದು, ಶ್ರೀ ಲಾಡ್ಜ್‌ನನಲ್ಲಿ ಇಟ್ಟು ವಿಚಾರಣೆ ನಡೆಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಮೃತರ ಮೈಮೇಲೆ ಗಾಯಗಳು ಕಂಡು ಬಂದಿವೆ ಎಂದು ತಿಳಿದು ಬಂದಿದ್ದು, ಆತನ ಸಾವಿಗೆ ಪೊಲೀಸರ ದೌರ್ಜನ್ಯ ಮತ್ತು ಚಿತ್ರಹಿಂಸೆಯೇ ಕಾರಣ ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಜಿಲ್ಲಾಧ್ಯಕ್ಷ ಅನೀಸ್ ಪಾಷ
ಬಂಧಿತ ವ್ಯಕ್ತಿಯನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುವ ಬದಲು ಲಾಡ್ಜ್‌ಗೆ ಯಾಕೆ ಕರೆದುಕೊಂಡು ಹೋದರು? ವಿಚಾರಣೆಯ ನೆಪದಲ್ಲಿ ಬಂಧಿತರಿಗೆ ಹಿಂಸೆ ನೀಡಲು ಕಾನೂನಿನಲ್ಲಿ ಅವಕಾಶಗಳಿಲ್ಲ. ಯಾವುದೇ ವ್ಯಕ್ತಿ ತಪ್ಪು ಮಾಡಿದಾಗ ಶಿಕ್ಷೆ ನೀಡಲು ನ್ಯಾಯಾಲಯಗಳಿವೆ. ಈ ಕಸ್ಟೋಡಿಯಲ್ ಡೆತ್ ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದರು.
ಇತ್ತೀಚೆಗೆ ಪೊಲೀಸರ ದೌರ್ಜನ್ಯ ಮಿತಿ ಮೀರಿದೆ. ಆಗಾಗ ವಿಚಾರಣೆಯ ನೆಪದಲ್ಲಿ ಹಲವರಿಗೆ ಚಿತ್ರಹಿಂಸೆ ನೀಡಿರುವುದು ಸಾಬಿತಾಗಿದೆ. ಸರ್ಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
‘ಸ್ವತಃ ಗೃಹ ಸಚಿವರೇ ಪೊಲೀಸರ ಅಕ್ರಮ ಮತ್ತು ಭ್ರಷ್ಟಾಚಾರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಅವರ ಮಾತಿಗೆ ಪೂರಕವಾಗಿ ಈ ಪ್ರಕರಣವೂ ಕಾಣುತ್ತಿದೆ. ಲಾಡ್ಜ್‌ಗೆ ಒಯ್ದಿರುವುದನ್ನು ನೋಡಿದರೆ ಪೊಲೀಸರು ಬಂಧಿತನಿಂದ ಹಣ ಪಡೆಯಲು ಮುಂದಾಗಿರಬೇಕು ಎಂಬ ಅನುಮಾನ ಮೂಡುತ್ತಿದೆ’ ಎಂದು ಆರೋಪಿಸಿದರು.
ಗಿಲ್ಡ್‌ನ ಕೆ.ಕೆ. ರಂಗನಾಥ್, ನಜೀರ್ ಅಹ್ಮದ್, ಎ.ಎಸ್. ಖಾದ್ರಿ, ಸಿರಾಜುದ್ದೀನ್, ರೇವಣಸಿದ್ದಪ್ಪ, ಖಲೀಲ್, ವಿನಾಯಕ ಎಚ್., ಎನ್. ಗುರುಬಸವರಾಜ್ ಇದ್ದರು.