Saturday, December 14, 2024
Homeಮಲೆನಾಡು ಕರ್ನಾಟಕಚಿಕ್ಕಮಗಳೂರುಕಾರು ಪಲ್ಟಿ: ಇಬ್ಬರು ಸಾವು 

ಕಾರು ಪಲ್ಟಿ: ಇಬ್ಬರು ಸಾವು 

ಚಿಕ್ಕಮಗಳೂರು: ಕೊಪ್ಪ ತಾಲ್ಲೂಕಿನ ಹರಿಹರಪುರ ಸಮೀಪದ ಸಿಗದಾಳು ಬಳಿ ಸೋಮವಾರ ತಡರಾತ್ರಿ
ಕಾರು ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.
ಕೊಪ್ಪದ ರಾಜಶೇಖರ್(51), ಮಲ್ಲಂದೂರಿನ ಮಣಿಕಂಠ(37) ಮೃತಪಟ್ಟವರು. ಇಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಲುವಾಗಿಲು ಕಡೆಯಿಂದ ಕೊಪ್ಪ ಕಡೆಗೆ ತೆರಳುವಾಗ ಅವಘಡ ಸಂಭವಿಸಿದೆ. ಸೇತುವೆ ಸನಿಹದಲ್ಲಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಏರಿ ಪಕ್ಕದ ತಗ್ಗು ಪ್ರದೇಶದ ಗದ್ದೆಗೆ ಉರುಳಿದೆ.