ವಿಜಯಪುರ: ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಜುಮನಾಳ ಬಳಿ ಕಾರು ಮತ್ತು ಬಸ್ ನಡುವೆ ಭಾನುವಾರ ರಾತ್ರಿ ಸಂಭವಿಸಿದ ಡಿಕ್ಕಿಯಲ್ಲಿ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರ ಹಿರಿಯ ಸಹೋದರಿ ಪುತ್ರ ವಿಜಯಕುಮಾರ ಕಾಶಿನಾಥ ದೊಡ್ಡಮನಿ(38) ಸೇರಿದಂತೆ ಸೋಲಾಪುರದ ನಾಂದೇಡದ ಚಿದಾನಂದ ನಾಗೇಶ ಸೂರ್ಯವಂಶಿ (45), ಸೋಲಾಪುರ ರಾಜೂರಿನ ಸೋಮನಾಥ ಕಾಳೆ (43) ಮತ್ತು ಸೋಲಾಪುರ ಬಸವನಗರ ಸಂದೀಪ ಪವಾರ(40) ಸಾವಿಗೀಡಾಗಿದ್ದಾರೆ.
ವಿಜಯಕುಮಾರ ಕಾಶಿನಾಥ ದೊಡ್ಡಮನಿ ಅವರ ಅಂತ್ಯಸಂಸ್ಕಾರ ನಾಳೆ ಬೆಳಿಗ್ಗೆ ಹಿಟ್ಟನಹಳ್ಳಿ ತಾಂಡಾದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.