ಶಿವಮೊಗ್ಗ: ಕಳೆದೊಂದು ವಾರದಿಂದ ಸುರಿದ ಭಾರಿ ಮಳೆಯ ಪರಿಣಾಮ ನಗರದ ಆಲ್ಕೊಳ ಸಮೀಪ ವಿಕಾಸ ಶಾಲೆ ಬಳಿ ಮನೆಯೊಂದು ಕುಸಿದು ಬಿದ್ದಿದ್ದು, ಭಾರಿ ಅಪಾಯ ತಪ್ಪಿದೆ.ಬಸವರಾಜು ಎಂಬುವವರಿಗೆ ಸೇರಿದ ಮನೆಯ ಗೋಡೆಗಳು ಸಂಪೂರ್ಣ ಕುಸಿದಿವೆ. ಮಧ್ಯಾಹ್ನ ಜೋರು ಶಬ್ದವಾಗಿದೆ. ಆತಂಕದಲ್ಲೇ ಎಲ್ಲರೂ ಹೊರಗೆ ಓಡಿ ಬರುತ್ತಿದ್ದಂತೆ ಮನೆ ಗೋಡೆ ಕುಸಿದಿದೆ. ಮಕ್ಕಳು, ಹಿರಿಯರು ಸೇರಿ ಸುಮಾರು ಒಂಭತ್ತು ಮಂದಿ ಮನೆಯಲ್ಲಿದ್ದರು. ಕುಟಂಬದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯೊಳಗಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೀಡಾಗಿವೆ.