Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಕೆರೆಗೆ ಬಿದ್ದ ಕಾರು: ಮೂವರು ಪವಾಡ ಸದೃಶ ಪಾರು

ಕೆರೆಗೆ ಬಿದ್ದ ಕಾರು: ಮೂವರು ಪವಾಡ ಸದೃಶ ಪಾರು

ದಾವಣಗೆರೆ: ಹರಿಹರದಿಂದ ದಾವಣಗೆರೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬಾತಿ ಕೆರೆಗೆ ಬಿದ್ದು ಮುಳುಗಿದೆ. ಕಾರಲ್ಲಿದ್ದ ಮೂವರು ಪವಾಡಸದೃಶವಾಗಿ ಪಾರಾಗಿದ್ದಾರೆ.

ಗೆ

ಹರಿಹರ ಅಮರಾವತಿ ಬಡಾವಣೆಯ ಮುನೀಸ್‌ ಧವನ್‌ ಎಂಬವರು ತನ್ನ ಪತ್ನಿ ಪಪಿಯಾ ಧವನ್‌, ತಾಯಿ ಉಷಾ ಧವನ್‌ ಅವರನ್ನು ಕೂರಿಸಿಕೊಂಡು ದಾವಣಗೆರೆ ಕಡೆಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಕಾರು ಕೆರೆಗೆ ಬಿದ್ದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಮೂವರೂ ಕಾರಿನಿಂದ ಹೊರಗೆ ಬಂದಿದ್ದಾರೆ. ಬಳಿಕ ಕ್ರೇನ್‌ ಮೂಲಕ ಕಾರನ್ನು ಮೇಲೆಕ್ಕೆತ್ತಲಾಯಿತು ಎಂದು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.