ಹೊಳೆನರಸೀಪುರ: ತಾಲ್ಲೂಕಿನ ಮಾವನೂರು ಸಮೀಪದ ಲಕ್ಷ್ಮೀಪುರ ಗ್ರಾಮದ ಸ್ವಾಮಿಗೌಡ ಅವರ ಪುತ್ರ ಸಾಗರ್ (15) ಮೃತದೇಹ ಮಾವನೂರು ಕೆರೆಯಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ
ಅ. 23ರ ಶನಿವಾರ ರಾತ್ರಿ ಕೆರೆಯ ಟಿಸಿಯ ಹತ್ತಿರ ಸಾಗರ್ ಧರಿಸಿದ ಬಟ್ಟೆಗಳು ಇದೆ ಎಂದು ಸಾಗರ್ ಚಿಕ್ಕಪ್ಪನ ಮಗ ತಮ್ಮೇಗೌಡ ಫೋನ್ ಮಾಡಿ ತಿಳಿಸಿದ್ದರಂತೆ. ಭಾನುವಾರ ಸಂಜೆ ಸಾಗರನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಸ್ವಾಮಿಗೌಡ ಅವರು ಸಾಗರನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಗರ ಠಾಣೆ ಎಸ್.ಐ ಅರುಣ್ ಗ್ರಾಮಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.