Saturday, December 14, 2024
Homeಸುದ್ದಿರಾಷ್ಟ್ರೀಯಕೇದರನಾಥ ದೇವಸ್ಥಾನಕ್ಕೆ ಶೂ ಧರಿಸಿ ಪ್ರವೇಶಿಸಿದ ಪ್ರಧಾನಿ ಮೋದಿ; ತೀವ್ರ ವಿರೋಧ

ಕೇದರನಾಥ ದೇವಸ್ಥಾನಕ್ಕೆ ಶೂ ಧರಿಸಿ ಪ್ರವೇಶಿಸಿದ ಪ್ರಧಾನಿ ಮೋದಿ; ತೀವ್ರ ವಿರೋಧ

ನವದೆಹಲಿ: ದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶೂ ಹಾಕಿಕೊಂಡು ಪ್ರವೇಶಿಸಿರುವುದು ಶಿವನ ಆರಾಧಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೈಲಾಸ ಪರ್ವತದ ನಂತರ ಉತ್ತರಖಂಡದ ಕೇದಾರನಾಥವನ್ನು ಶಿವನ ಎರಡನೇ ವಾಸಸ್ಥಾನವೆಂದು ಕರೆಯಲಾಗುತ್ತದೆ. ನೈಸರ್ಗಿಕವಾಗಿಯೇ ಮನೋಹರವಾದ ದೃಶ್ಯಗಳಿಂದ ಕೂಡಿರುವ ಈ ದೇವಾಲಯ ಪವಾಡಗಳ ಹಾಗೂ ಅನೇಕ ಪೌರಾಣಿಕ ಐತಿಹ್ಯಗಳನ್ನು ಒಳಗೊಂಡಿದೆ. ಅಂತಹ ಪೌರಾಣಿಕ ಇತಿಹಾಸ ಹೊಂದಿರುವ ದೇವಾಲಯದೊಳಗೆ ದೀಪಾವಳಿ ದಿನದಂದು ‘ಕ್ಯಾಮರಾಮ್ಯಾನ್ ಗಳ ಜೊತೆ’ಗೆ ಪ್ರಧಾನಿ ಮೋದಿಯವರು ಶೂ ಧರಿಸಿ ಪ್ರವೇಶಿಸಿ ದೇವರಿಗೆ ವಂದಿಸುವ, ದೇವಸ್ಥಾನವನ್ನು ಪ್ರದಕ್ಷಿಣೆ ಹಾಕುವ ವಿಡಿಯೋ ವೈರಲ್ ಆಗಿದೆ.್ದ ಈ ಕುರಿತು ಭಕ್ತರಿಂದ ‘ಕೇದಾರನಾಥ ದೇವಾಲಯ ಅಪವಿತ್ರವಾಗಿದೆ, ಹಿಂದೂ ಸಂಸ್ಕøತಿಯ ಮೇಲೆ ಅಪಚಾರ ಮಾಡಲಾಗಿದೆ’ ಮುಂತಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಹಿಂದೆ ಕರ್ನಾಟಕದಲ್ಲಿ ಸಾಕ್ಸ್ ಹಾಕಿಕೊಂಡು ದೇವಸ್ಥಾನಕ್ಕೆ ಸಿದ್ದರಾಮಯ್ಯ ಹೋಗಿದ್ದನ್ನೇ ವಿವಾದ ಮಾಡಿದ್ದ ಬಿಜೆಪಿಗೆ ಈಗ ಮೋದಿ ಶೂ ಹಾಕಿಕೊಂಡು ಹೋಗಿರುವುದು ಬಿಸಿತುಪ್ಪವಾಗಿ ಪರಿಣಮಿಸಿದೆ. ಟೀಕೆ ಮಾಡಲೂ ಆಗದೇ ಬಿಡಲೂ ಆಗದ ಪರಿಸ್ಥಿತಿ ಉಂಟಾಗಿದೆ.