Saturday, December 14, 2024
Homeಕರಾವಳಿ ಕರ್ನಾಟಕಉಡುಪಿಕೊಡವೂರು : ಇಂದಿರಾ ನಮನ, ಸಮ್ಮಾನ

ಕೊಡವೂರು : ಇಂದಿರಾ ನಮನ, ಸಮ್ಮಾನ

ಉಡುಪಿ: ಕೊಡವೂರು ಕಾಂಗ್ರೆಸ್ ಸಮಿತಿಯ ವತಿಯಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ 104 ನೇ ಜನ್ಮದಿನಾಚರಣೆಯ ನಿಟ್ಟಿನಲ್ಲಿ ಇಂದಿರಾ ನಮನ ಕಾರ್ಯಕ್ರಮವು ನ.21 ರಂದು ಸ್ಥಳೀಯ ವಿಪ್ರಶ್ರೀ ಸಭಾಭವನದಲ್ಲಿ ಜರಗಿತು.

ಉಡುಪಿ ನಗರಸಭಾ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಕೆ.ಪಿ.ಸಿ.ಸಿ ವಕ್ತಾರರಾದ ಸುಧೀರ್ ಕುಮಾರ್ ಮರೋಳಿಯವರು ಮಾತನಾಡಿ 15 ವರ್ಷಗಳ ಕಾಲ ಈ ದೇಶದ ಪ್ರಧಾನಿಯಾಗಿ ಶ್ರೀಮತಿ ಇಂದಿರಾ ಗಾಂಧಿಯವರು ಉಳುವವನನ್ನೆ ಹೊಲದ ಒಡೆಯನನ್ನಾಗಿ ಮಾಡುವ ಭೂ ಸುಧಾರಣಾ ಕಾನೂನು, ಬ್ಯಾಂಕ್ ರಾಷ್ಟ್ರೀಕರಣ, ಹಸಿರು ಕ್ರಾಂತಿ, ರಾಜಧನ ರದ್ದತಿ ಹಾಗೂ ಗರೀಬಿ ಹಠಾವೋ ಘೋಷಣೆಯೊಂದಿಗೆ ಬಡತನ ನಿರ್ಮೂಲನೆಗಾಗಿ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶದ ಜನ ಸಾಮಾನ್ಯರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದರು.

ಹಾಗೆಯೇ ಪಂಡಿತ್ ಜವಾಹರ್ ಲಾಲ್ ನೆಹರುರವರು ಮಾನವೀಯ ಮೌಲ್ಯಗಳನ್ನು ಉದ್ದೀಪನ ಗೊಳಿಸಿದ ಶ್ರೇಷ್ಠ ಜನನಾಯಕ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ,ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ ,ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ಸೌರಭ್ ಬಲ್ಲಾಳ್, ಹರಿಶ್ಚಂದ್ರ ಕೊಡವೂರು, .ಪ್ರವೀಣ್ ಜಿ ಕೊಡವೂರು,ಕೆ.ಬಾಬ, ಕಿಶೋರ್ ಗರ್ಡೆ, ಜನಾರ್ದನ್ ಪುತ್ರನ್, ದಿವಾಕರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಸಾತ್ವಿಕ್ ಪದ್ಮನಾಭ ಭಟ್, ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಜೆರೊಮ್ ಲಾಯ್ಡ್ ಮಾಬ್ಯಾನ್,ರೋಹನ್ ಶೋನ್ ಮಾರ್ಟಿಸ್ ಅವರನ್ನು ಸಮ್ಮಾನಿಸಲಾಯಿತು.

ನೆಹರು ಅವರ ಕುರಿತಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಜಿಲ್ಲಾ ಮಟ್ಟದ ಆನ್ಲೈನ್ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಪ್ರಾಥಮಿಕ ವಿಭಾಗದಲ್ಲಿ ಅನುಷ್ಕಾ ಎನ್, ಶ್ರೀನೀತ್ ಸೇರಿಗಾರ್, ತ್ರಪ್ತಿ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಿಗಳಿಗೆ ರೂ3000,2000,10000 ಹಾಗೂ ಪಾರಿತೋಷಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಅಶಿಕಾ ಕೆಲ,ಸಂಹಿತಾ ಜಿ.ಪಿ.ಮನ್ವಿತಾ ಎಮ್ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ,ಸ್ಥಾನಿಗಳಿಗೆ ರೂ 5000,3000,2000 ದೊಂದಿಗೆ ಪಾರಿತೋಷಕ ಹಾಗೆಯೇ ತೀರ್ಪು ಗಾರರ ಮೆಚ್ಚುಗೆಗೆ ಪಾತ್ರವಾದ ಆರು ಜನ ಸ್ಪರ್ಧಾಳುಗಳಿಗೆ ರೂ 500 ಮತ್ತು ಪಾರಿತೋಷಕ ನೀಡಲಾಯಿತು.ಮಾಧವ ಬನ್ನಂಜೆ ಸ್ವಾಗತಿಸಿದರು, ಪ್ರಕಾಶ್ ಜಿ ಕೊಡವೂರು ವಂದಿಸಿದರು, ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.