Saturday, December 14, 2024
Homeಕ್ರೀಡೆಕೊನೆಗೂ ಭಾರತಕ್ಕೆ ಜಯ

ಕೊನೆಗೂ ಭಾರತಕ್ಕೆ ಜಯ

ಅಬುದಾಬಿ: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೊನೆಗೂ ಭಾರತ ಜಯದ ಟ್ರ್ಯಾಕ್‌ಗೆ ಮರಳಿದೆ.

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ಗಳ ವಿರುದ್ಧ ಹೀನಾಯವಾಗಿ ಸೋತ ಬಳಿಕ ಸೆಮಿಫೈನಲ್‌ ತಲುಪುವ ಕನಸು ನುಚ್ಚುನೂರಾಗಿದೆ. ಆದರೆ ಅಫ್ಗಾನಿಸ್ತಾನದ ವಿರುದ್ಧ ಭರ್ಜರಿ ಜಯಗಳಿಸಿರುವುದರಿಂದ ಪುಟ್ಟ ಆಸೆ ಗರಿಗೆದರಿದೆ. ನ್ಯೂಜಿಲೆಂಡ್‌ಗೆ ಮುಂದೆ ನಮೀಬಿಯಾ ಮತ್ತು ಅಫ್ಗಾನಿಸ್ತಾನದ ಜತೆಗೆ ಪಂದ್ಯ ಇದೆ. ಆ ಎರಡರಲ್ಲಿ ಯಾವುದಾದರೂ ಒಂದು ಪಂದ್ಯದಲ್ಲಿ ನ್ಯೂಜಿಲೆಂಡ್‌ ಸೋತರೆ ಆಗ ಭಾರತಕ್ಕೆ ಅವಕಾಶ ಸಿಗಲಿದೆ. ಆದರೆ ಬಲಿಷ್ಠ ನ್ಯೂಜಿಲೆಂಡ್‌ ಸೋಲುತ್ತದೆ ಎನ್ನುವುದು ತಿರುಕನ ಕನಸು ಆಗುವ ಸಂಭವ ಹೆಚ್ಚಿದೆ.

ಬುಧವಾರ ಅಬುದಾಬಿಯಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತವು ರೋಹಿತ್‌ ಶರ್ಮಾ (74), ಕೆ.ಎಲ್‌. ರಾಹುಲ್‌(69), ಹಾರ್ದಿಕ್‌ ಪಾಂಡ್ಯ(ಅಜೇಯ 35) ಮತ್ತು ರಿಷಬ್‌ ಪಂತ್‌ (ಅಜೇಯ 27) ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ 2 ವಿಕೆಟ್‌ ಕಳೆದುಕೊಂಡು 210 ರನ್‌ ಗಳಿಸಿತು. ಅದನ್ನು ಬೆನ್ನತ್ತಿದ ಅಫ್ಗಾನ್‌ 6 ವಿಕೆಟ್‌ ನಷ್ಟಕ್ಕೆ 144 ರನ್ ಗಳಿಸಿ 66 ರನ್‌ಗಳ ಭಾರಿ ಅಂತರದಿಂದ ಸೋಲೊಪ್ಪಿಕೊಂಡಿತು.